September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರೂ. 2.00 ಕೋಟಿ ಅನುದಾನದಲ್ಲಿ ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆ- ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಶಿಲಾನ್ಯಾಸ, ಶಾಸಕ ಹರೀಶ್ ಪೂಂಜ ಭಾಗಿ

ಬೆಳ್ತಂಗಡಿ:ರಾಜ್ಯಸಭಾ ಸಂಸದರಾದ,ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂ. 2.00 ಕೋಟಿ ಅನುದಾನದಲ್ಲಿ ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆ- ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ ಡಾಂಬರೀಲರಣ ಮತ್ತು ಒಳಚರಂಡಿ ನಿರ್ಮಾಣಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಹಾಲು ಉತ್ಪಾದನೆಯಲ್ಲಿ ಬೀದರ್ ಜಿಲ್ಲೆ ತೀರಾ ಹಿಂದೆ ಉಳಿದಿದ್ದು, ಅಲ್ಲಿಗೆ ಹೆಚ್ವಿನ ಅನುದಾನ ನೀಡಿ ಹಾಲು ಹೆಚ್ಚಳ ಮಾಡಲಾಗಿದೆ‌.ಸ್ಮಾರ್ಟ್ ಕ್ಲಾಸ್ ಗೆ ಸಹಕಾರ ನೀಡಲಾಗಿದೆ.ಎಲ್ಲರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಸಿರಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು‌

ಶಾಸಕ ಹರೀಶ್ ಪೂಂಜ ಮಾತನಾಡಿ ಸಿರಿ ಸಂಸ್ಥೆ ಈ ಭಾಗಕ್ಕೆ ಬಂದ ಮೇಲೆ ಜನರ ಅನುಕೂಲಕ್ಕಾಗಿ ಇಲ್ಲಿನ ರಸ್ತೆಗೆ ಖಾವಂದರು ರೂ.2 ಕೋಟಿ ಅನುದಾನ ನೀಡಿ ಸಹಕರಿಸಿದ್ದಾರೆ.ಸಾವಿರಾರು ಜನರು,ವಾಹನ ಓಡಾಡುವ ರಸ್ತೆ ಇದಾಗಿದ್ದು,ಉಪ್ಪಿನಂಗಡಿಗೆ ಸಂಪರ್ಕಿಸುತ್ತಿದೆ. ರಾಜ್ಯಸಭಾ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಇಡೀ ದೇಶಕ್ಕೆ ಖಾವಂದರು ಮಾದರಿಯಾಗಿದ್ದಾರೆ.ಸಿರಿ ಸಂಸ್ಥೆಯ ಎದುರಿರುವ 15 ಎಕ್ರೆ ಜಾಗದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದರು.

ವೇದಿಕೆಯಲ್ಲಿ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ,ಎಸ್.ಕೆ.ಡಿ.ಆರ್.ಡೊ.ಪಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್,ಸಿರಿ ನಿರ್ದೇಶಕ,ಉದ್ಯಮಿ ರಾಜೇಶ್ ಪೈ,ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ,ನಗರ ಪಂಚಾಯತ್ ಮುಖ್ಯಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

ಡಾ.ಡಿ.ಹೆಗ್ಗಡೆಯವರನ್ನು ಪಟ್ಟಣ ಪಂಚಾಯತ್ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ,ಸಂಪತ್ ರತ್ನ ಉಜಿರೆ,ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ,ಜಗದೀಶ್ ಡಿ,ಜೇಮ್ಸ್ ರುಡ್ ಸೆಟ್,ಪ್ರಸಾದ್ ಬೆಳ್ತಂಗಡಿ, ಶ್ರೀನಾಥ್ ಕೆ.ಎಮ್,ರಜನಿ ಕುಡ್ವ,ವಿವೇಕಾನಂದ ಪ್ರಭು,ಕಿರಣ್ ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ ಎಂಡಿ ಕೆ.ಎನ್ ಜನಾರ್ಧನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಸಿರಿ ಸಂಸ್ಥೆಯ ಜೀವನ್ ನಿರೂಪಿಸಿದರು. ಸಿಇಓ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Related posts

ಜಿಲ್ಲಾ ವಕ್ಫ್‌ ಅಧಿಕಾರಿ ಹಾಜಿ ಅಬೂಬಕ್ಕರ್ ಸೇವೆಯಿಂದ ನಿವೃತ್ತಿ: ಕಾಜೂರು- ಕಿಲ್ಲೂರು ವತಿಯಿಂದ ಗೌರವಾರ್ಪಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ರಾಜ್ಯಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ : ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿನಿ ಅನೀಶ ಆರೋಲ್ ಡಿಸೋಜಾ ಪ್ರಥಮ

Suddi Udaya

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ

Suddi Udaya

ಬಟ್ಲಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಫಾರೂಕ್ ರಿಗೆ ಬಟ್ಲಡ್ಕ ಜಮಾಅತ್ ವತಿಯಿಂದ ಸನ್ಮಾನ

Suddi Udaya

ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

Suddi Udaya
error: Content is protected !!