ಬೆಳ್ತಂಗಡಿ: ಕಲೆ ,ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ಬಳಂಜ ಶ್ರಿ ಉಮಾಮಹೇಶ್ವರ ಯುವಕ ಮಂಡಲ ಕಳೆದ ನಾಲ್ಕೂವರೆ ದಶಕಗಳ ಹಿಂದೆ ಬಳಂಜದಲ್ಲಿ ಪ್ರಾರಂಭಗೊಂಡು ಇದೀಗ ಬಳಂಜ ಶಾಲಾ 75 ನೇ ಅಮೃತ ಮಹೋತ್ಸವ ಆಚರಣೆಗೆ ಸಿದ್ದಗೊಳ್ಳುತ್ತಿದ್ದು ಇದರ ಹಿನ್ನಲೆಯಲ್ಲಿ ನೂತನ ಪದಾದಿಕಾರಿಗಳ ಆಯ್ಕೆ ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಉಸ್ಮಾನ್ ಬಳಂಜ, ಹೆಚ್. ಧರ್ಣಪ್ಪ ಪೂಜಾರಿ, ಪ್ರಮೋದ್ ಕುಮಾರ್ ಜೈನ್ ,ಯುವಕ ಮಂಡಲದ ಪೋಷಕರಾದ ಕೆ ವಸಂತ ಸಾಲ್ಯಾನ್ ಕಾಪಿನಡ್ಕ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸುಕೇಶ್ ಪೂಜಾರಿ ಹಾನಿಂಜ, ಉಪಾಧ್ಯಕ್ಷರಾಗಿ ಗಣೇಶ್ ದೇವಾಡಿಗ ಸಂಭ್ರಮ, ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ ಪೊಸಮಾರ್, ಜೊತೆಕಾರ್ಯದರ್ಶಿಯಾಗಿ ರಜತ್ ಹೆಗ್ಡೆ,ಕೋಶಾಧಿಕಾರಿಯಾಗಿ ಗುರುಪ್ರಸಾದ್ ಹೆಗ್ಡೆ ಇವರನ್ನು ಆಯ್ಕೆಮಾಡಲಾಯಿತು.
ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಸಾದ್ ಕಾಪಿನಡ್ಕ,ಯತೀಶ್ ದೇವಾಡಿಗ, ಸಾಂಸ್ಕೃತಿಕ ರಾಯಭಾರಿಯಾಗಿ ಸತೀಶ್ ದೇವಾಡಿಗ,ಸುಧೀರ್ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋಧರ ಶೆಟ್ಟಿ ಅಟ್ಲಾಜೆ,ಸುಭಾಷ್ ಹೇವ, ಯೋಗೀಶ್ ಯೈಕುರಿ, ಪ್ರಣಾಮ್ ಶೆಟ್ಟಿ ನಾಲ್ಕೂರು,ಸಚಿನ್ ಶೆಟ್ಟಿ,ಸಂತೋಷ್ ಪಿ ಕೋಟ್ಯಾನ್ ಬಳಂಜ, ರಂಜಿತ್ ನಾಲ್ಕೂರು, ಪ್ರವೀಣ್ ಲಾಂತ್ಯಾರ್, ಮನೀಶ್ ಬಳಂಜ, ನಿತೇಶ್ ಕಾಪಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು.