32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ:ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ’ ಸಂಭ್ರಮ: ವಿವಿಧ ಬಗೆಯ ವೆರೈಟಿ ಚಿನ್ನಾಭರಣಗಳಿಗೆ ಮುಳಿಯ ಸಂಸ್ಥೆ ಹೆಸರುವಾಸಿಯಾಗಿದೆ

ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ ಎಂಟು ದಶಕಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಏಪ್ರಿಲ್ 22ರಿಂದ ಮೇ 20 ರ ವರಗೆ ಮುಳಿಯ ಚಿನ್ನೋತ್ಸವ ನಡೆಯಲಿದ್ದು ಇದರ ಉದ್ಘಾಟನೆಯನ್ನು ಚಲನಚಿತ್ರ ನಟಿ ಸಿಂಚನ ಪಿ ರಾವ್ ನೆರವೇರಿಸಿ ಮಾತನಾಡಿ ನಂಬಿಕೆ ಮತ್ತು ಪರಿಶುದ್ದತೆಗೆ ಹೆಸರುವಾಸಿಯಾದ ಮುಳಿಯ ನಮ್ಮೆಲ್ಲರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ. ಗ್ರಾಹಕರಿಗೆ ಉತ್ತಮವಾದ ಸೇವೆ ಇಲ್ಲಿ ದೊರೆಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಳಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸವಿತಾ ಜಯದೇವ್ ವಹಿಸಿ ಮಾತನಾಡಿ ನಮ್ಮ ಕುಟುಂಬದ ಎಲ್ಲರೂ ಮುಳಿಯದ ಗ್ರಾಹಕರು.ವೈರಿಟಿಗಳ ಚಿನ್ನಾಭರಣಗಳಿಗೆ ಮುಳಿಯ ಹೆಸರುವಾಸಿಯಾಗಿದೆ. ಮುಳಿಯದಲ್ಲಿ ನಗುಮೊಗದ ಸೇವೆ ಗ್ರಾಹಕರಿಗೆ ಸಿಗುತ್ತಿದೆ ಎಂದರು.

ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣುಗೋಪಾಲ್ ಶರ್ಮ ಮಾತನಾಡಿ ಮುಳಿಯದಲ್ಲಿ ಪ್ರತಿವರ್ಷ 2 ಸಲ ಚಿನ್ನೋತ್ಸವ ಮಾಡುತ್ತೇವೆ. ಊರಿನ‌ ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ಡಿಸೈನ್ ಮಾಡಿ ನೀಡುತ್ತೇವೆ. ಅಂತರಾಷ್ಟ್ರೀಯ ಮಟ್ಟದ ಡಿಸೈನ್ ನಮ್ಮಲ್ಲಿದೆ. 80 ವರ್ಷದ ಹಿಂದೆ ಚಿನ್ನಕ್ಕೆ 2 ರೂ ಇತ್ತು. ಇವತ್ತು ಹತ್ತಿರತ್ತಿರ 7 ಸಾವಿರಕ್ಕೆ ಬಂದು ನಿಂತಿದೆ. ಚಿನ್ನಕ್ಕೆ ಇನ್ವೆಸ್ಟ್ಮೆಂಟ್ ಮಾಡಬಹುದು. ಗ್ರಾಹಕರ ಸಹಕಾರ ಹಾಗೂ ಪ್ರೀತಿಯಿಂದ ಬೆಳ್ತಂಗಡಿಯಲ್ಲಿ ಮುಳಿಯ ನಂಬರ್ ಒನ್ ಸಂಸ್ಥೆಯಾಗಿ ಬೆಳೆದಿದೆ ಎಂದರು.

ಬೆಳ್ತಂಗಡಿ ಮುಳಿಯದ ಲೋಹಿತ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು.

ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ, ಇತ್ಯಾದಿ ನಿಮ್ಮ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವದಲ್ಲಿ ಭಾಗವಹಿಸಿ ನಿಮ್ಮ ನೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗೆ ಖರೀದಿ ಮಾಡಬಹುದಾಗಿದೆ.ಈ ಬಾರಿಯ ಚಿನ್ನೋತ್ಸವದಲ್ಲಿ ಅಮೂಲ್ಯ ಆಭರಣಗಳು ಹಾಗೂ ಕಿಸ್ನ ಮಾದರಿಯ ಜ್ಯುವೆಲ್ಸ್ ಇರಲಿದೆ.  ಅಲ್ಲದೇ ಗ್ರಾಹಕರಿಗೆ ಖರೀದಿಯ  ಮೇಲೆ ಬಹುಮಾನಗಳು ಇರಲಿದೆ. ವಿವಿಧ ವಿನ್ಯಾಸಗಳ ಆಭರಣಗಳು ವಿಶೇಷ ಬೆಲೆಯಲ್ಲಿ ಲಭ್ಯವಾಗಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಮುಳಿಯ ಸಂಸ್ಥೆಯ ದಿನೇಶ್ ಅವರು ಧನ್ಯವಾದ ಸಲ್ಲಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜು ಆಶ್ರಯದಲ್ಲಿ ಎರಡು ದಿನಗಳ ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟ ಉದ್ಘಾಟನೆ

Suddi Udaya

ನಾರಾವಿ ಗ್ರಾಮ ಸಭೆ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಸ್ಥರ ಚರ್ಚೆ

Suddi Udaya

ಇಂದಬೆಟ್ಟು ವಲಯದ ಕಲ್ಲಾಜೆಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya
error: Content is protected !!