ಮುಂಡಾಜೆಯ ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

Suddi Udaya

ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ರಸ್ತೆ ಬದಿ ಕಾಡಾನೆ ಕಂಡುಬಂದ ಘಟನೆ ಎ.23 ರಂದು ಬೆಳಿಗ್ಗೆ ನಡೆದಿದೆ.


ಮುಂಡಾಜೆಯಿಂದ ಕಕ್ಕಿಂಜೆ ಕಡೆ ತೆರಳುತ್ತಿದ್ದ ಬೈಕ್ ಮೆಕ್ಯಾನಿಕ್ ಒಬ್ಬರು ಬೆಳಿಗ್ಗೆ 9ಗಂಟೆ ಸಮಯ ಮುಂಡಾಜೆಯ ಕಾಪು ಬಳಿ ಹೆದ್ದಾರಿ ಬದಿಯ ಪೊದೆಯಲ್ಲಿ ನಿಂತುಕೊಂಡಿದ್ದ ಕಾಡಾನೆಯನ್ನು ಕಂಡಿದ್ದಾರೆ.
ಅವರು ತಕ್ಷಣ ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಚಿಬಿದ್ರೆ ವಿಭಾಗದ ಡಿ ಆರ್ ಎಫ್ ಒ ಭವಾನಿ ಶಂಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಕಾಡಾನೆ ರಸ್ತೆಯ ಇನ್ನೊಂದು ಬದಿ ಇರುವ ಅರಣ್ಯ ಇಲಾಖೆಯ ಹಳೆ ನರ್ಸರಿ ಮೂಲಕ ಪ್ರವೇಶಿಸಿ ಮೃತ್ಯುಂಜಯ ನದಿಯನ್ನು ದಾಟಿ ದುಂಬೆಟ್ಟು ಕಡೆ ಹೋಗಿರುವ ಗುರುತುಗಳು ಪತ್ತೆಯಾಗಿವೆ.
ಕಳೆದ ಎರಡು ದಿನಗಳ ಹಿಂದೆ ಪುದುವೆಟ್ಟು ಸಮೀಪ ರಾತ್ರಿ ಕಾರು ಚಾಲಕನಿಗೆ ಕಂಡುಬಂದಿದ್ದ ಕಾಡಾನೆ ಬಳಿಕ ನೇರ್ತನೆ, ಕಲ್ಮಂಜದಲ್ಲಿ ಸುಳಿದಾಡಿತ್ತು. ಅದೇ ಆನೆ ಮುಂಡಾಜೆಯಲ್ಲಿ ಕಂಡುಬಂದಿರುವ ಶಂಕೆ ವ್ಯಕ್ತವಾಗಿದೆ.

Leave a Comment

error: Content is protected !!