22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ: ಶಿವಕೀರ್ತಿ ನಿಲಯದಲ್ಲಿ‌ “ಹನುಮ‌ ಜಯಂತಿ” ಆಚರಣೆ

ಶಿಶಿಲ : ರಾಮ ಹನುಮ ಈ ಭೂಮಿಯಲ್ಲಿ ಚಿರಕಾಲ ಇದ್ದಾರೆ. ಎಲ್ಲಿ ಭಕ್ತಿಯಿಂದ ಭಜಿಸುವವರಿರುತ್ತಾರೊ ಅಲ್ಲಿ ರಾಮ ಹನುಮನಿರುತ್ತಾರೆ. ಭಜನೆ ಸಂಸ್ಕಾರ ಬೆಳೆಸುತ್ತದೆ. ಅಳುಕನ್ನು ದೂರ ಮಾಡುತ್ತದೆ. ನಮ್ಮ ಧರ್ಮ ನಂಬಿಕೆ ಇರುವಲ್ಲಿ ಹನುಮ ರಾಮನಿರುತ್ತಾರೆ. ನಾವು ಇರುವಲ್ಲಿಯವರೆಗೆ ಅವರೂ ಇರುತ್ತಾರೆ. ಅವರು ಇರುವಲ್ಲಿಯವರೆಗೆ ನಾವೂ ಇರುತ್ತೆವೆ. ಎಂದು ಸಾಹಿತಿ, ಬರಹಗಾರ, ನಿವೃತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೇಶ್ವರ ಭಟ್ ತಿಳಿಸಿದರು.


ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ‌ ನಡೆದ ” ಹನುಮ‌ ಜಯಂತಿ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಕಾರ್ಯಕ್ರಮವನ್ನು ಅರಿಕೆಗುಡ್ದೆ ದೇವಾಲಯದ ಪ್ರಕಾಶ್ ಪಿಲಿಕಬೆ ಉದ್ಘಾಟನೆ ಮಾಡಿ ಹನೂಮಂತ ರಾಮಾಯಣದ ರತ್ನ, ಭಕ್ತಿಗೆ ಮತ್ತು ಆದರ್ಶಕ್ಕೆ ಹನುಮ ನಮಗೆಲ್ಲಾ ಮಾದರಿ . ಹನುಮನ ಭಜಿಸಿದವರಿಗೆ ಎಲ್ಲಾ ಪುಣ್ಯ ಕಾರ್ಯಗಳೂ ಜೀವನದಲ್ಲಿ ಲಭಿಸಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯಿಂದ ಕುಣಿತ ಭಜನೆ, ಭಜನಾ ಪಟುಗಳಿಗೆ ಅಭಿನಂದನೆ, ರಾಮಾಯಣ ಹಕ್ಕಿ ನೋಟ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ಜರಗಿತ್ತು.
ಭಜನಾ ಕಾರ್ಯಕ್ರಮವನ್ನು ಸುಂದರ ಬಿಳಿನೆಲೆ ಮತ್ತು ತಂಡದವರು ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಗ್ಗ, ಉದಯಶಂಕರ ಅರಸಿನಮಕ್ಕಿ, ಪುತ್ತೂರು ರವೀಂದ್ರ ಕುದ್ದಣ್ನಾಯ, ಭಾಸ್ಕರ ರಾವ್ ಮುಂಡ್ರುಪ್ಪಾಡಿ , ರವಿ ಕಾಸರಗೋಡು, ವಿಶು ಕುಮಾರ್ ಪೆರೆಡೆಲು, ಪ್ರೇಮಚಂದ್ರ ಪೆರ್ಲ, ಮೋಹನ ನೆಲ್ಲಿತ್ತಾಯ, ಶಿವರಾಮ ನೆಲ್ಲಿತ್ತಾಯ, ಶ್ರೀಪತಿ ಶಿಶಿಲ, ಪ್ರಕಾಶ ನೆಲ್ಲಿತ್ತಾಯ ಮುಂತಾದವರು ಭಾಗವಹಿಸಿದ್ದರು.

Related posts

ಪೆರೋಡಿತ್ತಾಯಕಟ್ಟೆ ಶಾಲೆಗೆ ಬ್ಯಾರಿ ಕೇಡ್ ಕೊಡುಗೆ

Suddi Udaya

ಕೊಕ್ಕಡ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು

Suddi Udaya

ಕುಲದೈವೋ ಬ್ರಹ್ಮ ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ

Suddi Udaya

ರಾಜ್ಯಮಟ್ಟದ ಕ್ರೀಡಾಕೂಟ: ಮುಂಡಾಜೆ ಸರಸ್ವತಿ ಶಾಲಾ ವಿದ್ಯಾರ್ಥಿ ಜೀವಿತ ಬಿ.ಎಸ್ ಕುಮಿಟಿ ಮತ್ತು ಕಟದಲ್ಲಿ ದ್ವಿತೀಯ ಸ್ಥಾನ

Suddi Udaya

ಸೆಂಟ್ ಲಾರೆನ್ಸ್ ಕಥೇಡ್ರಲ್ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಡಾ|| ವೀರೇoದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧoತಿ ಪ್ರಯುಕ್ತ ಗೌರವಾರ್ಪಣೆ

Suddi Udaya
error: Content is protected !!