September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಂಬೆಟ್ಟು ಸ. ಉ.ಪ್ರಾ. ಶಾಲೆಯಲ್ಲಿ ಪರಿಸರ ಗಿಡ ನಾಟಿ ಕಾರ್ಯಕ್ರಮ

ಮುಡುಕೋಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಮುಡುಕೋಡಿ ಗ್ರಾಮದ ಉಂಬೆಟ್ಟು ದ,ಕ, ಜಿ, ಪಂ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಗಿಡ ನಾಟಿ ಕಾರ್ಯಕ್ರಮವನ್ನು ಪಂಚಾಯತ್ ಉಪಾಧ್ಯಕ್ಷ ಉಮೇಶ್ ರವರು ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಅಭಿವೃದ್ಧಿ ಅಧ್ಯಕ್ಷ ಧನಂಜಯ ಜೈನ ಮಾತನಾಡಿ ಗಿಡಗಳು ಮಾನವನ ದೇಹದಲ್ಲಿ ಒಂದು ಭಾಗ ಅವುಗಳನ್ನು ಸರಿಯಾಗಿ ಉಳಿಸಿ ಬೆಳೆಸುವುದು ಪರಿಸರ ಸಂರಕ್ಷಣೆಯ ಬಗ್ಗೆ ಪರಿಸರದಿಂದ ಸಿಗುವ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಯೋಜನೆಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಶಾಲೆಯ ಹೊರಾಂಗಣದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ ಮಾಡಿದರು. ಒಕ್ಕೂಟದ ಅಧ್ಯಕ್ಷ ಹರೀಶ್ ಹಾಗೂ ಶಾಲಾ ಶಿಕ್ಷಕಿ ನಳಿನಾಕ್ಷಿ, ಸುನಂದಾ ಕೃಷಿ ಮೇಲ್ವಿಚಾರಕರು, ಕೃಷ್ಣ ವಲಯದ ಮೇಲ್ವಿಚಾರಕರು ಶ್ರೀಮತಿ ಶಾಲಿನಿ, ಶೌರ್ಯವಿಪತ್ತು ಸ್ವಯಂ ಸೇವಕರಾದ ನಾರಾಯಣ, ಕೃಷ್ಣಪ್ಪ, , ಶೀತಲ, ಮೀನಾಕ್ಷಿ, ಸದಾನಂದ (ಸಂಯೋಜಕರು) ಒಕ್ಕೂಟದ ಪದಾಧಿಕಾರಿಗಳು ದತ್ತ ಕುಮಾರ್ ಸಹ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸೇವಾಪ್ರತಿನಿಧಿ ಜಲಜಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Related posts

ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ; ಸನ್ಮಾನ

Suddi Udaya

ಇಂದಬೆಟ್ಟು : ಕಜೆಯಲ್ಲಿ ನಿಧಿಗಾಗಿ ಶೋಧ ಕಾರ್ಯ

Suddi Udaya

ಡಿ.17: ಬೆಳ್ತಂಗಡಿ ತಾಲೂಕಿನ 18ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ.ಎ. ಕೃಷ್ಣಪ್ಪ ಪೂಜಾರಿ ಆಯ್ಕೆ

Suddi Udaya

ಉಳ್ಳಾಲ ಸಯ್ಯಿದ್ ಮದನಿ ವಲಿಯುಲ್ಲಾಹಿ ದರ್ಗಾಶರೀಫ್ ನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತೆ ವಿಶೇಷ ಪ್ರಾರ್ಥನೆ

Suddi Udaya

ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

Suddi Udaya

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya
error: Content is protected !!