ಉರುವಾಲು: ಹಲೇಜಿ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವದ ನೇಮೋತ್ಸವವು ಎ.24ರಿಂದ ಪ್ರಾರಂಭಗೊಂಡು 25ರವರೆಗೆ ನಡೆಯಲಿದೆ.
ಇಂದು ಬೆಳಗ್ಗೆ ಪ್ರಾರ್ಥನೆ, ತೋರಣಮೂಹೂರ್ತ, ಸ್ವಸ್ತಿ ಪುಣ್ಯಾಹ, ಗಣಯಾಗ, ಪಂಚಾಮೃತ ಅಭಿಷೇಕ, ಏಕಾದಶ ರುದ್ರಪಾರಾಯಣ ಸಹಿತ ಅಭಿಷೇಕ, ನವಕ ಕಲಶಾಭಿಷೇಕ ಪ್ರಧಾನ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ದೇವಸ್ಥಾನದ ಬಳಿ ಹೊರೆಕಾಣಿಕೆ ಸ್ವೀಕಾರ, ಅನ್ನಸಂತರ್ಪಣೆ ನಡೆಯಿತು.
ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಅರ್ಧ ಏಕಾಹಃ ಭಜನಾ ಕಾರ್ಯಕ್ರಮ ನಡೆಯಲಿದ್ದು ಇದರ ಉದ್ಘಾಟನೆಯನ್ನು ಮಾರುತಿಪುರ ರೈತ ಬಂಧು ಮಾಲಕರು ಶಿವಶಂಕರ ನಾಯಕ್ ನೆರವೇರಿಸಿದರು.. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
ರಾತ್ರಿ ಗಂಟೆ 6-00 ರಿಂದ ಶ್ರೀ ರಂಗಪೂಜೆ, ಪ್ರಾರ್ಥನೆ, ದೈವಕ್ಕೆ ಪರ್ವ ಸೇವೆ, ರಾತ್ರಿ 8-00 ರಿಂದ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ., ಅನ್ನಸಂತರ್ಪಣೆ, ರಾತ್ರಿ ಗಂಟೆ 10-00ಕ್ಕೆ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.