ಉಜಿರೆ : ನಾವು ಯಾವಾಗಲು ತಂದೆ ತಾಯಿಯ ಆಸ್ತಿಗೆ ಆಸೆ ಪಡಬಾರದು. ನಮ್ಮ ಆಸ್ತಿಯನ್ನು ನಾವೇ ಮಾಡಿಕೊಳ್ಳಬೇಕು’ ಎಂದು ಸಂಧ್ಯಾ ಟ್ರೇಡರ್ಸ್ ನ ಉತ್ಪಾದನ ಹಾಗೂ ಪ್ಯಾಕೇಜಿಂಗ್ ಘಟಕದ ಮುಖ್ಯ ಕಾರ್ಯನಿರ್ವಾಹಕರು ಶ್ರೀಮತಿ ಅರ್ಚನಾ ರಾಜೇಶ್ ಪೈ ಹೇಳಿದರು.
ಇವರು ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಸ್ನಾತಕೋತ್ತರ ಕಾಲೇಜು ಉಜಿರೆಯಲ್ಲಿ ಎಂಟರ್ಪ್ರಿನಾರ್ಶಿಪ್ ಡೆವಲಪ್ಮೆಂಟ್ ಸೆಲ್ ನ ಸಹಭಾಗೀತ್ವದಲ್ಲಿ ಸ್ಟೂಡೆಂಟ್ ವೆಲ್ಫೇರ್ ಕಮಿಟಿ ಹಾಗೂ ವಿಮೆನ್ ಡೆವಲಪ್ಮೆಂಟ್ ಸೆಲ್ಲ್ ನ ವತಿಯಿಂದ ಮಹಿಳಾ ಉದ್ಯಮಿಗಳ ಅವಕಾಶಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ನಡೆದ ಕ್ಯಾಂಡಿಡ್ ಟಾಕ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
“ಹೆಣ್ಣುಮಕ್ಕಳು ಉದ್ಯಮ ಮಾಡುವುದು ದೊಡ್ಡ ವಿಷಯವಲ್ಲ.. ಮನೆ, ಮಕ್ಕಳು, ಸಂಸಾರವನ್ನು ಸಂಭಾಲಿಸಿಕೊಂಡು ಉದ್ಯಮ ಮಾಡುವುದೇ ದೊಡ್ಡ ವಿಷಯ “ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲರು ಡಾ. ಬಿ ಎ ಕುಮಾರ ಹೆಗ್ಡೆ ವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಏನೇ ಉದ್ಯೋಗ ಮಾಡಬೇಕು ಅಂತ ಹೊರಟ್ರೆ ಆತ್ಮವಿಶ್ವಾಸ, ಛಲ ತುಂಬಾ ಅಗತ್ಯ. ಆದ್ದರಿಂದ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಎಂದರು.
ಕಾರ್ಯಕ್ರಮದಲ್ಲಿ ಇಡಿ ಸೆಲ್ಲ್ ನ ಸಂಯೋಜಕರಾದ ಸುಮನ್ ಜೈನ್, ಸ್ವಾತಿ ಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಿಯಾ ನಿರೂಪಿಸಿದರು.