ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಗುರಿಪಳ್ಳದಲ್ಲಿ ಬ್ರಹ್ಮಶ್ರೀ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನಾದ್ಯಂತ ಮಹಿಳೆಯರ ಬಲವರ್ಧನೆಯ ಗುರಿಯೊಂದಿಗೆ ಸ್ವಸಹಾಯ ಸಂಘವನ್ನು ಆರಂಭಿಸಲಾಗುತ್ತಿದ್ದು ಅದರಂತೆ ಇದೀಗ ಗುರಿಪಳ್ಳದ ಕೊಡೆಕ್ಕಲ್, ನೂಚಿಲ ಪರಿಸರದ ಮಹಿಳೆಯರು ಒಟ್ಟು ಸೇರಿ ಬ್ರಹ್ಮಶ್ರೀ ಮಹಿಳಾ ಸ್ವಸಹಾಯ ಸಂಘವನ್ನು ರಚಿಸಿ ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ಹಿರಿಯರಾದ ವೆಂಕಪ್ಪ ಪೂಜಾರಿ ಕೊಡೆಕ್ಕಲ್ ನೆರವೇರಿಸಿದರು.

ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷ ಎಂ. ಕೆ. ಪ್ರಸಾದ್ ಸ್ವಸಹಾಯ ಸಂಘದ ಕಾರ್ಯಶೈಲಿಯ ಬಗ್ಗೆ ಮಾಹಿತಿ ನೀಡಿದರು.

ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕ ಗುರುರಾಜ್ ಗುರಿಪಳ್ಳ, ಯುವ ಬಿಲ್ಲವ ವೇದಿಕೆ ಪ್ರ.ಕಾರ್ಯದರ್ಶಿ ಸಂತೋಷ್ ಸಾಲಿಯಾನ್ ಅರಳಿ ಶುಭ ಹಾರೈಸಿದರು.

ಸ್ವಸಹಾಯ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಮೋಹಿನಿ, ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ, ಕೋಶಾಧಿಕಾರಿಯಾಗಿ ಶ್ರೀಮತಿ ಪ್ರತಿಭಾ ಆಯ್ಕೆಯಾದರು. ಸಂಘದ ಸದಸ್ಯರಾದ ಶ್ರೀಮತಿ ಅನಿತಾ ಸ್ವಾಗತಿಸಿ, ಶ್ರೀಮತಿ ದೇವಕಿ ಧನ್ಯವಾದವಿತ್ತರು.

Related posts

ದೇವಸ್ಥಾನದ ಅಭಿವೃದ್ದಿಗೆ ಪ್ರಸಾದಂ ಯೋಜನೆಯಡಿಯಲ್ಲಿ ಅನುದಾನ ಒದಗಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಜು.12: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್‌ನಲ್ಲಿ ರೈತ ತರಬೇತಿ ಕಾರ್ಯಕ್ರಮ

Suddi Udaya

ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿರಿ ಕೇಂದ್ರ ಕಛೇರಿಗೆ ಭೇಟಿ

Suddi Udaya

ಕಕ್ಕಿಂಜೆ: ರವಿ ಗುರುಸ್ವಾಮಿ ಅಸೌಖ್ಯದಿಂದ ನಿಧನ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಮಂಗಳೂರಿನಲ್ಲಿ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya
error: Content is protected !!