April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಎಕ್ಸೆಲ್ ನ ವಿದ್ಯಾರ್ಥಿಗಳು ಜೆ ಇ ಇ ದ್ವಿತೀಯ ಸುತ್ತಿನಲ್ಲೂ ಅಮೋಘ ಸಾಧನೆ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ ಇ ಇ ಮೈನ್ಸ್ ಎರಡನೆಯ ಸುತ್ತಿನಲ್ಲೂ ಮಹತ್ತ್ವದ ಸಾಧನೆ ಮಾಡಿದ್ದಾರೆ.

ಪ್ರಜ್ವಲ್ ಭೌತ ವಿಜ್ಞಾನದಲ್ಲಿ 100 ಅಂಕಗಳ ಜೊತೆಗೆ ಒಟ್ಟು 99.88 ಪರ್ಸಂಟೇಲ್ ಪಡೆದುಕೊಂಡಿದ್ದಾರೆ. ಮೊಹಮ್ಮದ್ ನೌಮನ್ 99. 11 ಶೇ, ಚಿನ್ಮಯ್ ನಾಯ್ಕ್ 98 .82 ಶೇ, ಅಭಿಷೇಕ್ 98.70 , ಧ್ಯಾನ್ 98.64, ತನ್ಮಯಿ ಶ್ಯಾನುಭಾಗ್ 98.51 ಶೇ, ರಿಷ್ವಿತ್ ಶೆಟ್ಟಿ 97.26 ಶೇ., ವಿವೇಕ್ ವಿನಾಯಕ್ 96.56 , ತನ್ವಿ 96.52 ಶೇ, ಇಂದ್ರೇಶ್ 95.44, ರೇವಂತ 95.31 ಶೇ ರಾಹುಲ್. ಸಿ 95.02, ವೈಭವ್ ಕೆ 94.70 ಶೇಕಡಾ ಪರ್ಸೆಂಟೈಲ್ ಪಡೆದು ಕೊಂಡಿದ್ದಾರೆ.

ಜೆ ಇ ಇ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಅಡ್ವಾನ್ಸ್ ಎಕ್ಸಾಂ ಗೆ ಅರ್ಹತೆ ಪಡೆದಿರುವುದು ಗಮನೀಯ. ಇಂಟಿಗ್ರೇಟೆಡ್ ಸಿಸ್ಟಂ ನಲ್ಲಿ ಇಲ್ಲಿಯ ತರಗತಿಗಳು ನಡೆಯುವುದರಿಂದ ಬೋರ್ಡ್ ಎಕ್ಸಾಂ ಗಳಲ್ಲಿ ಮಾತ್ರವಲ್ಲದೆ , ಜೆ ಇ ಇ, ಸಿ ಇ ಟಿ ಹಾಗೂ ನೀಟ್ ಪರೀಕ್ಷೆಗಳಲ್ಲೂ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡುತ್ತಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು , ಪ್ರಾಂಶುಪಾಲರು , ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕರು,ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೇಸಿಗೆ ಶಿಬಿರ

Suddi Udaya

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಭಾಸ್ಕರ ಬಾರ್ಯ

Suddi Udaya

ಕಳೆಂಜ: ಮಳೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

Suddi Udaya

ಉಜಿರೆಯಲ್ಲಿ ಎಬಿವಿಪಿ ವತಿಯಿಂದ ಬೃಹತ್ ವಿಜಯ ಯಾತ್ರೆ

Suddi Udaya
error: Content is protected !!