ಲಾಯಿಲ: ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ : 12 ತೆಂಗಿನಕಾಯಿ ಗಣಹೋಮ, ತೋರಣ ಮುಹೂರ್ತ

Suddi Udaya

ಲಾಯಿಲ: ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಎ.27 ಮತ್ತು ಎ.28 ರಂದು ಇಂದಬೆಟ್ಟು-ಕುತ್ರೊಟ್ಟು ಅಸ್ರಣ್ಣರಾದ ಎಸ್. ಗೋಪಾಲಕೃಷ್ಣ ಉಪಾಧ್ಯಾಯ ರವರ ನೇತೃತ್ವದಲ್ಲಿ ಹಾಗೂ ವೇ.ಮೂ. ಶ್ರೀಕಾಂತ ಭಟ್ ರವರ ಪೌರೋಹಿತ್ಯದಲ್ಲಿ ಜರಗಲಿರುವುದು.


ಇಂದು(ಎ.27) ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, 12 ತೆಂಗಿನಕಾಯಿ ಗಣಹೋಮ, ತೋರಣ ಮುಹೂರ್ತ, ನಾಗ ಸಾನಿಧ್ಯದಲ್ಲಿ ತಂಬಿಲ, ಅಶ್ವಥ ಪೂಜೆ, ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ನಡೆಯಿತು.

ಈ ಸಂದರ್ಭದಲ್ಲಿ ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ರಾತ್ರಿ ಆಶ್ಲೇಷಾ ಬಲಿ, ನಿತ್ಯ ಪೂಜೆ. ನಡೆಯಲಿದೆ.
ಎ.28 ರಂದು ಚಂಡಿಕಾ ಹೋಮ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಾನಿಧ್ಯದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಲಾಯಿಲ ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ, ಶ್ರೀ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮೈಸಂದಾಯ, ಲೆಕ್ಕೆಸಿರಿ, ಜುಮಾದಿ ಬಂಟ ಹಾಗೂ ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.

Leave a Comment

error: Content is protected !!