24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿ

ಚುನಾವಣಾ ಕೇಂದ್ರದ ಎಡವಟ್ಟು: ಮತಗಟ್ಟೆ ಸಂಖ್ಯೆ ಬದಲಾವಣೆ: ಕೊಕ್ಕಡದಿಂದ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಿದ ಮತದಾರ

ಕೊಕ್ಕಡದಲ್ಲಿ ಮತ ಚಲಾಯಿಸಬೇಕಿದ್ದ ಮತದಾರರೊಬ್ಬರು ಮತಗಟ್ಟೆ ಸಂಖ್ಯೆ ಬದಲಾಗಿ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಬೇಕಾಗಿ ಬಂದ ಘಟನೆ ಎ.26ರಂದು ನಡೆದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಅಶೋಕ ಎಂಬವರಿಗೆ ಮತಗಟ್ಟೆ ಸಂಖ್ಯೆ 23ರಲ್ಲಿ (ಕಾಪಿನಬಾಗಿಲು ಸೈಂಟ್ ಜೋನ್ ಅನುದಾನಿತ ಹಿ.ಪ್ರಾ.ಶಾಲೆ ಕೌಕ್ರಾಡಿ) ಮತ ಚಲಾಯಿಸಬೇಕಿತ್ತು. ಅಶೋಕರವರು ಈ ಹಿಂದೆ ಪುಣೆಯಲ್ಲಿ ಉದ್ಯೋಗ ಮಾಡಿಕೊಂಡು ಅಲ್ಲೇ ಇದ್ದ ಕಾರಣ ಮತ ಚಲಾಯಿಸಲು ಅಲ್ಲಿಯ ಮತದಾನ ಕೇಂದ್ರವನ್ನು ಆಶ್ರಯಿಸಿದ್ದರು. ಆದರೆ ಅವರು ಇತ್ತೀಚೆಗೆ ಕೊಕ್ಕಡದ ತನ್ನ ಊರಿಗೆ ಬಂದು ನೆಲೆಸಿದ ಕಾರಣ ಮತದಾನ ಕೇಂದ್ರವನ್ನು ಊರಿಗೆ ಬದಲಾಯಿಸಿದ್ದರು. ಮತದಾನ ಕೇಂದ್ರ ಬದಲಾಯಿಸುವ ಸಂದರ್ಭದಲ್ಲಿ ಚುನಾವಣಾ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 23ರ ಬದಲು 213 ಎಂದು ನಮೂದಾಗಿ ಎಡವಟ್ಟಾಯಿತು. ಇದರಿಂದಾಗಿ ಅಶೋಕರವರಿಗೆ 23ರ ಮತಗಟ್ಟೆ ಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ವೆಬ್ ಸೈಟ್ ಮೂಲಕ ಸರ್ಚ್ ಮಾಡಿ 213 ಮತಗಟ್ಟೆ ಕೇಂದ್ರವು ಮರ್ಕಂಜದಲ್ಲಿ ಮಿತ್ತಡ್ಕದಲ್ಲಿ ಬರುವುದನ್ನು ಖಚಿತಪಡಿಸಿ ಸುಮಾರು 52ಕಿ.ಮೀ. ದೂರ ಬಂದು ಮಿತ್ತಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಮತ ಚಲಾಯಿಸಿದರು.

ಅಶೋಕರವರ ಮನೆಯವರು 23ನೇ ಮತಗಟ್ಟೆಯಲ್ಲಿಯೇ ಮತ ಚಲಾಯಿಸಿದ್ದಾರೆ. “ನಾನು ದೇಶಕ್ಕಾಗಿ ಇಲ್ಲಿಗೆ ಬಂದು ಮತ ಚಲಾಯಿಸಿದ್ದೇನೆ” ಎಂದು ಅಲ್ಲಿ ಸೇರಿದ್ದ ಕಾರ್ಯಕರ್ತರೊಡನೆ ತನ್ನ ಮಾತನ್ನು ಹಂಚಿಕೊಂಡಿದ್ದಾರೆ.

Related posts

ಧರ್ಮಸ್ಥಳ: ಮಾನ್ವಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬಿ.ಜೆ.ಪಿ ಮನೆ ಮನೆ ಪ್ರಚಾರ ಕಾರ್ಯಕ್ಕೆ ಹರೀಶ್ ಪೂಂಜ ಚಾಲನೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಉಜಿರೆ ಲಕ್ಷ್ಮೀ ಗ್ರೂಪ್ ಗೆ ಭೇಟಿ

Suddi Udaya

ಬೆಳ್ತಂಗಡಿ ಪ.ಪಂ. ಮುಖ್ಯಾಧಿಕಾರಿಯಾಗಿ ರಾಜೇಶ್ ಮರು ನೇಮಕ

Suddi Udaya

ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya
error: Content is protected !!