September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಾಧಕರು

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

ಜೆಸಿಐ ಭಾರತದ ವಲಯ 15 ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮವಾದ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ನ ವಿಭಾಗದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಬಳಂಜ ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಧರ್ನಮ್ಮ ಟೀಚರ್ ಮತ್ತು ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಕೇಶವತಿ ಡಿ ಇವರನ್ನು ಎ.23ರಂದು ಬೆಳ್ತಂಗಡಿ ಜೆಸಿಐ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾದ ರಂಜಿತ್ ಎಚ್ ಡಿ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ, ಎಲ್ಲರನ್ನು ಸ್ವಾಗತಿಸಿದರು.

ಬೆಳ್ತಂಗಡಿ ತಾಲ್ಲೂಕು ಚುನಾವಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಬೆಳ್ತಂಗಡಿಯ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ಹಾಗೂ ತಾಲ್ಲೂಕು ಪಂಚಾಯತ್ ಬೆಳ್ತಂಗಡಿಯ ವ್ಯವಸ್ಥಾಪಕ ಪ್ರಶಾಂತ್ ಡಿ, ಮಾಯಾ ಹಿರಿಯ ಪ್ರಾಥಮಿಕ ಶಾಲೆ ಬೆಳಾಲಿನ ಶಿಕ್ಷಕರು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯ ತರಬೇತುದಾರ ಯೋಗೇಶ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ವೇದಿಕೆಯಲ್ಲಿ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ್ ಅಧಿಕಾರಿ ಮಂಜು, SKDRDP ಯೋಜನಾಧಿಕಾರಿ ಜಯಾನಂದ ಬಳಂಜ, ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಪ್ರಶಾಂತ್ ಲಾಯಿಲ, ಉಪಾಧ್ಯಕ್ಷರುಗಳಾದ ಆಶಾ ಪ್ರಶಾಂತ್, ಶೈಲೇಶ್, ಸದಸ್ಯರಾದ ರಜತ್, ಜೆಜೆಸಿ ತ್ರಿಷಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವೇದಿಕೆ ಆಹ್ವಾನವನ್ನು ಉಪಾಧ್ಯಕ್ಷರಾದ ಸುಧೀರ್ ಕೆ ನ್ ಹಾಗೂ ಜೆಸಿ ವಾಣಿಯನ್ನು ಜೆಜೆಸಿ ಸದಸ್ಯರಾದ ದೀಪ್ತಿ, ಸನ್ಮಾನ ಪತ್ರವನ್ನು ಲೇಡಿ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್ ಮತ್ತು ಜೆಜೆಸಿ ಅಧ್ಯಕ್ಷರಾದ ಸಮನ್ವೀತ್ ಕುಮಾರ್ ಇವರು ವಾಚಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಶಂಕರ್ ರಾವ್ ತಮ್ಮ ಅನಿಸಿಕೆಗಳೊಂದಿಗೆ ಧನ್ಯವಾದ ಸಲ್ಲಿಸಿದರು.

Related posts

ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾದ ವಿಜಯ ಕುಮಾರ್ ರವರಿಗೆ ಶಾಸಕ ಹರೀಶ್ ಪೂಂಜರಿಂದ ವಾಹನ ಹಸ್ತಾಂತರ

Suddi Udaya

ಎಸ್.ಡಿ.ಎಂ ಪ.ಪೂರ್ವ ಕಾಲೇಜು : ಶೈಕ್ಷಣಿಕ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ – ‘ ಪುರಸ್ಕಾರ್ – 2025: ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕರಿಗೆ ಪುರಸ್ಕಾರ-ಸಾಧಕ ಶಿಕ್ಷಕರಿಗೆ ಸನ್ಮಾನ

Suddi Udaya

ಅಳದಂಗಡಿಯಲ್ಲಿ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಶುಭಾರಂಭ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ತೋಟತ್ತಾಡಿ : ಚಿಬಿದ್ರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಸಿದ್ಧತಾ ಸಭೆ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ : ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪುನರಾಯ್ಕೆ

Suddi Udaya
error: Content is protected !!