24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಘಟಕ ಸುಬ್ರಹ್ಮಣ್ಯ ಇದರ ವತಿಯಿಂದ ದಿಶಾ ಎಸ್. ರವರಿಗೆ ಸನ್ಮಾನ.

ಕುಕ್ಕೆ ಸುಬ್ರಮಣ್ಯ ಏ.27: ಕುಕ್ಕೆ ಸುಬ್ರಮಣ್ಯದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಘಟಕ ಸುಬ್ರಮಣ್ಯ ವತಿಯಿಂದ ಕಡಬ ತಾಲೂಕಿನ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ದಿಶಾ ಎಸ್ ರವರು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿ ಜಿಲ್ಲೆಗೆ ನಾಲ್ಕನೇ ಸ್ಥಾನವನ್ನು ಗಳಿಸಿರುತ್ತಾರೆ. ಇವರ ಸಾಧನೆಯನ್ನು ಗೌರವಿಸಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಘಟಕ ಸುಬ್ರಮಣ್ಯ ಇವರ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿನ ಸಂಸ್ಥಾಪಕರಾದ ಡಾ. ರವಿ ಕಕ್ಕೆ ಪದವು, ರಾಘವೇಂದ್ರ ಹೋಟೆಲ್ ಮಾಲಕರಾದ ಯಜ್ಞೇಶ್ ಆಚಾರ್ಯ, ರೋಟರಿ ಕ್ಲಬ್ಬಿನ ಪೂರ್ವ ವಲಯದ ಅಧ್ಯಕ್ಷರಾದ ಗೋಪಾಲ್ ಎಣ್ಣೆ ಮಜಲ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ಅಧ್ಯಕ್ಷರಾದ ವಿಶ್ವನಾಥ ನಡು ತೋಟ, ಗೀತಾ ರವಿ ಕಕ್ಕೆ ಪದವು, ಗಣೇಶ್, ಚಿನ್ಮಯ, ಅಮೃತಾ ಲಕ್ಷ್ಮಿ, ಬಿ.ಎಂ.ಎಸ್ ಆಟೋ ಚಾಲಕಮಾಲಕ ಸಂಘದ ಅಧ್ಯಕ್ಷರಾದ ದಿನೇಶ್ ಶಿರಾಡಿ, ಷಣ್ಮುಖ ಉಪ್ಪರ್ನ, ರೂಪ, ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ವಿಜಯ್ ಕುಮಾರ್ ಅಮೈ ಮತ್ತಿತರರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿಯ ತೇಜಸ್ವಿಗೆ ಐಸರ್ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್

Suddi Udaya

ಭಜರಂಗದಳ ನಿಷೇಧ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ: ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya

ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳದ ಹಲವು ಕಡೆ ಎನ್‌ಐಎ ದಾಳಿ

Suddi Udaya

ಧರ್ಮಸ್ಥಳ: ರಸ್ತೆಯ ಬದಿ ನಿಲ್ಲಿಸಿದ್ದ ಬೈಕ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!