ಗುರುವಾಯನಕೆರೆ: ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ಶಾಂತೀಶ್ವರ ಫ್ಯೂಯಲ್ ಇದರ ಶುಭಾರಂಭವು ಶಕ್ತಿನಗರ ಗುರುವಾಯನಕೆರೆಯಲ್ಲಿ ಎ.29 ರಂದು ನಡೆಯಿತು.
ಶ್ರೀ ಶಾಂತೀಶ್ವರ ಫ್ಯೂಯಲ್ ನ ಉದ್ಘಾಟನೆಯನ್ನು ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಅವರು ರಲ್ಲಿ ಉದ್ಘಾಟಿಸಿ ಶುಭಕೋರಿದರು.
ದೀಪ ಪ್ರಜ್ವಲನೆಯನ್ನು ಗುರುವಾಯನಕೆರೆ ಜೀನೆಂದ್ರ ನಿಲಯದ ಸುಮನಾಜಿ ಅಮ್ಮ ನೇರವೇರಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚ್ಚಂದ್ರ ಜೈನ್ ಮಾತನಾಡಿ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡುವ ದೃಷ್ಟಿಯಲ್ಲಿ ಈ ಪೆಟ್ರೋಲಿಯಂ ಸಂಸ್ಥೆ ಪ್ರಾರಂಭಗೊಂಡಿದೆ. ನಾವೆಲ್ಲರೂ ಸೇರಿ ಈ ಸಂಸ್ಥೆಯನ್ನು ಬೆಳೆಸೋಣ ಎಂದರು.
ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ ತಾಲೂಕಿನಲ್ಲಿ ಅತೀ ವೇಗದಲ್ಲಿ ಬೆಳೆಯುತ್ತಿರುವ ಗ್ರಾಮೀಣ ಪ್ರದೇಶ ಗುರುವಾಯನಕೆರೆ, ಸಾಲು ಸಾಲು ಕಾಲೇಜಿನ ಉದಯ, ರೆಸ್ಟೋರೆಂಟ್ಗಳು, ಅದಕ್ಕೆ ಪ್ರತಿಯಾಗಿ ಪೆಟ್ರೋಲ್ ಪಂಪ್ ಬಂದಿದೆ. ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದರು.
ವೇದಿಕೆಯಲ್ಲಿ ಎಂ.ಆರ್.ಪಿ.ಎಲ್ ಚೀಫ್ ರಿಜಿನ್ ಮ್ಯಾನೇಜರ್ ಸ್ವಾಮಿ ಪ್ರಸಾದ್,ವಿದ್ವತ್ ರೆಸಿಡೇನ್ಸಿಯಲ್ ಪಿಯು ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ನ ಪಾಲುದಾರ ವೆಂಕಟ್ರಾಯ ಮಲ್ಯ,ಧನಕೀರ್ತಿ ಬಂಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಶಿಕಿರಣ್ ಜೈನ್ ಬೆಳ್ತಂಗಡಿ, ರಾಕೇಶ್ ಹೆಗ್ಡೆ ಬಳಂಜ,ಸಂಪತ್ ಕುಮಾರ್ ಜೈನ್ ಪಡಂಗಡಿ,ಸುನೀಲ್ ಕುಮಾರ್ ಜೈನ್ ಶಿರ್ಲಾಲು,ವಸಂತ ಮಜಲು ಕಳಿಯ, ಶೀತಲ್ ಜೈನ್ ಶಿರ್ಲಾಲು,ಸುಕೇಶ್ ಕುಮಾರ್ ಕಡಂಬು,ಮಹಾವೀರ್ ಆರಿಗ ನಾರಾವಿ,ರಾಧಾಕೃಷ್ಣ ರೈ,ರಾಜ್ ಶೇಖರ್ ಶೆಟ್ಟಿ ಮಡಂತ್ಯಾರು, ಹಾಗೂ ವಿವಧ ಕ್ಷೇತ್ರದ ಗಣ್ಯರು, ಊರವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಕೋರಿದರು.
ಸಂಸ್ಥೆಯ ಉದ್ಘಾಟನೆ ಸಂದರ್ಭದಲ್ಲಿ ಸಹಕಾರ ನೀಡಿದ ಜೆರಾಲ್ಡ್ ಕೊರೆಯ,ಸುಕೇಶ್ ಜೈನ್ ಅರಮಲೆ ಬೆಟ್ಟ,ರಾಜ್ ಶೇಖರ್ ಶೆಟ್ಟಿ, ಸುನಿಲ್ ಜೈನ್ ಶಿರ್ಲಾಲು, ಶ್ರೆಯಾಸ್ ಜೈನ್,ರಾಮಚ್ಚಂದ್ರ,ವಿಶ್ವಾಸ್ ಜೈನ್,ಸಂಪತ್ ಕುಮಾರ್ ಜೈನ್ ಗೌರವಿಸಲಾಯಿತು.
ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಅನುದೀಪ್ ಜೈನ್ ಸ್ವಾಗತಿಸಿದರು.