27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆಯಲ್ಲಿ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

ಬೆಳ್ತಂಗಡಿ : ಗೇರುಕಟ್ಟೆ ವೆಲೆನ್ಸಿ ಕಟ್ಟಡದಲ್ಲಿ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ರಕ್ತ ಪರೀಕ್ಷಾ ಕೇಂದ್ರ ಮೇ.1 ಶುಭಾರಂಭ ಗೊಂಡಿದೆ.

ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಹಾಗೂ ಗೇರುಕಟ್ಟೆ “ಜ್ಯೋತಿ ಕ್ಲಿನಿಕ್” ಡಾ.ಅನಂತ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು.

ಸ್ಥಳೀಯ ಅಂಗಡಿ ಮಾಲೀಕರು, ಹಿತೈಷಿಗಳು ಆಗಮಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಕೃಪಾ ಮತ್ತು ಕುಮಾರಿ ಚೈತ್ರಾ ಉಪಸ್ಥಿತರಿದ್ದು ಸಹಕರಿಸಿದರು.

ಸಂಸ್ಥೆಯ ಮಾಲೀಕರಾದ ಶಿತಿಕಂಠ ಭಟ್ ಮಾತನಾಡುತ್ತಾ ನಮ್ಮ ರಕ್ತ ಪರೀಕ್ಷಾ ಕೇಂದ್ರದಲ್ಲಿ ರಕ್ತ,ಕಫ ಪರೀಕ್ಷೆಯನ್ನು ಕ್ಲಪ್ತ ಸಮಯದಲ್ಲಿ ಮಾಡಲಾಗುತ್ತದೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ದೊರೆಯುತ್ತದೆ ಎಂದು ಹೇಳಿದರು. ಹಾಗೂ ಆಗಮಿಸಿದ ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

Related posts

ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುವ ಉದ್ದೇಶ ಹಾಗೂ ಆದರ್ಶ ಗಣೇಶೋತ್ಸವದ ಆಚರಣೆ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಾಹಿತಿ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನಿಂದ ಬಳಂಜ ಶಾಲೆಗೆ ಕಂಪ್ಯೂಟರ್ ಕೊಡುಗೆ

Suddi Udaya

ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದ ಪ್ರದಾನ ಸಮಾರಂಭ

Suddi Udaya

ಮಾ.23-27: ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವರ ವರ್ಷಾವಧಿ ಜಾತ್ರೆ-ನಡ್ವಾಲ್ ಸಿರಿಜಾತ್ರೆ

Suddi Udaya

ಬಿಜೆಪಿ ಎಸ್. ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೊಕ್ಕಡದ ವಿಠಲ ಕುರ್ಲೆರವರ ವಿವಾಹ ನಿಶ್ಚಿರ್ತಾಥದ ಆಮಂತ್ರಣ ಪತ್ರಿಕೆಯಲ್ಲಿ ಮತ್ತೊಮ್ಮೆ ಮೋದಿಜಿ -2024 ಹಾಗೂ ಮೋದಿಯವರ ಸಾಧನೆಯ ಪಟ್ಟಿ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ-2024

Suddi Udaya
error: Content is protected !!