32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಲಿಯೋ ಕ್ಲಬ್ ಗೆ ‘ಉದಯೋನ್ಮುಖ ನಕ್ಷತ್ರ’ ಅವಾರ್ಡ್

ಬೆಳ್ತಂಗಡಿ : ಪುತ್ತೂರಿನ ಸುಧನ ವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಲಿಯೋ ಕ್ಲಬ್ ಜಿಲ್ಲೆ 317 ಡಿ ವತಿಯಿಂದ ನಡೆದ ಜಿಲ್ಲಾ ವಾರ್ಷಿಕ ಲಿಯೋ ಮೀಟ್ “ಸುಧನ” ಮೇ 05 ರಂದು ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಲಿಯೋ ಕ್ಲಬ್ ಗೆ ಈ ವರ್ಷ ಉದಯೋನ್ಮುಖ ನಕ್ಷತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಉತ್ತಮ ಪ್ರಾಯೋಜಕತ್ವ ಕ್ಲಬ್ ಎಂದು ಜಿಲ್ಲಾ ಲಿಯೋ ಅಧ್ಯಕ್ಷರಾದ ರಂಜಿತಾ ಶೆಟ್ಟಿ, ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿ ಸೋಜ ಹಾಗೂ ಜಿಲ್ಲಾ ತಂಡದವರು ಗೌರವಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಉಮೇಶ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷರು ಹಾಗೂ ಲಿಯೊ ಅಡ್ವೈಸರ್ ಲ.ಡಾ. ದೇವಿಪ್ರಸಾದ್ ಬೊಲ್ಮ,, ಲ. ರಾಮಕೃಷ್ಣ ಗೌಡ, ಲ.ತುಕಾರಾಮ್, ಲ ಕಿರಣ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಲಿಯೋ ಕ್ಲಬ್ ಅಧ್ಯಕ್ಷರಾದ ಅಪ್ಸರ ಗೌಡ, ಕೋಶಾಧಿಕಾರಿ ಅಭಿಜ್ಞಾ ಬೊಲ್ಮ,, ಲಿಯೋ ಸದಸ್ಯರಾದ ಡಾ. ಸುಶ್ಮಿತಾ, ಡಾ. ಚಿರನ್ವಿ, ನಿಕ್ಷೇಪ್, ಸಂಪತ್, ಅಕ್ಷಯ್, ಮನೋಜ್, ದೀಕ್ಷಿತ್, ಗ್ಲೆನ್, ಉಪಸ್ಥಿತರಿದ್ದರು.

Related posts

ಬೆಳಾಲು : ಕಾನನದಲ್ಲಿ ಸಿಕ್ಕ ಮಗುವಿನ ಪೋಷಕರ ಪತ್ತೆಗೆ ಮನವಿ

Suddi Udaya

ಚಾರ್ಮಾಡಿ: ಅಣಿಯೂರು ಗುತ್ತು ನಿವಾಸಿ ಕೃಷಿಕ ವಾಸುದೇವ ಗೌಡ ನಿಧನ

Suddi Udaya

ಬೆಳ್ತಂಗಡಿ ನಗರದಲ್ಲಿ ರೂ.40 ಲಕ್ಷ ವೆಚ್ಚದ ಹಿಂದೂ ರುದ್ರಭೂಮಿ ಲೋಕಾರ್ಪಣೆ

Suddi Udaya

ಉಜಿರೆ: ಕುಂಜರ್ಪ ನಿವಾಸಿ ತಿಮ್ಮಪ್ಪ ಪೂಜಾರಿ ನಿಧನ

Suddi Udaya

ಬಂಗಾಡಿ ಕೊಲ್ಲಿಯಲ್ಲಿ ಯುವ ನಾಯಕ ರಂಜನ್ ಜಿ ಗೌಡರವರ ಸಾರಥ್ಯದಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ

Suddi Udaya

ವೇಣೂರು: ರವಿಚಂದ್ರ ಭಂಡಾರಿ ನಿಧನ

Suddi Udaya
error: Content is protected !!