September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ನಗರದಲ್ಲಿ ರೂ.40 ಲಕ್ಷ ವೆಚ್ಚದ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ಹಾಗೂ ಹಿಂದೂ ರುದ್ರಭೂಮಿ ಸಮಿತಿ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ನಗರದ ಹೊಳೆಬದಿಯಲ್ಲಿ ಸುಮಾರು 40 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಕಾರ್ಯಕ್ರಮವು ಅ.27 ರಂದು ಜರುಗಿತು.


ಶಾಸಕ ಹರೀಶ್ ಪೂಂಜ ಅವರು ನೂತನವಾಗಿ ನಿರ್ಮಿಸಲಾದ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೈದರು. ಈ ಸಂದರ್ಭ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ನಗರಕ್ಕೆ ಅಗತ್ಯವಾಗಿ ಬೇಕಾಗಿದ್ದ ರುದ್ರಭೂಮಿಯನ್ನು ಪಂಚಾಯತು ಆಡಳಿತ ಹಾಗೂ ಹಿಂದೂ ರುದ್ರಭೂಮಿ ಸಮಿತಿಯವರು ನಿರ್ಮಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ರುದ್ರಭೂಮಿಯ ಕಟ್ಟಡದ ಎದುರು ಭಾಗಕ್ಕೆ ಶೀಟ್ ಅಳವಡಿಕೆಗೆ ರೂ.5 ಲಕ್ಷವನ್ನು ತನ್ನ ಶಾಸಕ ನಿಧಿಯಿಂದ ನೀಡಿದ್ದೇನೆ. ರುದ್ರಭೂಮಿಯ ಹತ್ತಿರವೇ ನದಿ ಇರುವುದರಿಂದ ಅಪರಕ್ರಿಯೆ ಮಾಡುವವರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ನದಿಗೆ ಸ್ಟೆಫ್ ನಿರ್ಮಾಣ ಸೇರಿದಂತೆ ರುದ್ರಭೂಮಿಯ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಅವರು ಮಾತನಾಡಿ ನಗರೋತ್ಥಾನ ಅನುದಾನ ರೂ.40 ಲಕ್ಷದಲ್ಲಿ ಶಾಸಕರ ಹಾಗೂ ಸಮಿತಿಯವರ ಸಹಕಾರದಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ರುದ್ರಭೂಮಿಯ ಕಟ್ಟಡ ನಿರ್ಮಿಸಲಾಗಿದೆ. ಎದುರಿನ ಶೀಟ್ ಅಳವಡಿಕೆಗೆ ಶಾಸಕರು ರೂ.5 ಲಕ್ಷ ಅನುದಾನ ನೀಡಿದ್ದಾರೆ. ದಾನಿಗಳು ಪೂರ್ಣ ಸಹಕಾರ ನೀಡಿದ್ದಾರೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರುದ್ರಭೂಮಿಯಲ್ಲಿ ನಿರ್ಮಿಸಲಾದ ಶೌಚಾಲಯದ ಕಿಟಕಿ, ಬಾಗಿಲುಗಳನ್ನು ಯಾರೋ ಕಳವು ಮಾಡಿದ್ದು, ಈ ರೀತಿ ಸಾರ್ವಜನಿಕರ ಉಪಯೋಗದ ವಸ್ತುಗಳನ್ನು ಯಾರೂ ಕಳ್ಳತನ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ರುದ್ರಭೂಮಿಗೆ ಸಹಕಾರ ನೀಡಿದ ದಾನಿಗಳನ್ನು ಹಾಗೂ ಗುತ್ತಿಗೆದಾರರಾದ ರವಿ ಮತ್ತು ಜಯಕುಮಾರ್ ಅವರನ್ನು ಹೂ ನೀಡಿ ಶಾಸಕರು ಗೌರವಿಸಿದರು.

ವೇದಿಕೆಯಲ್ಲಿ ಪಂಚಾಯತು ಉಪಾಧ್ಯಕ್ಷೆ ಕು| ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಶಶಿಧರ ಪೈ, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ, ವಾರ್ಡ್ ಸದಸ್ಯ ರಜನಿ ಕುಡ್ವ, ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಹಿಂದೂ ರುದ್ರಭೂಮಿ ಸಮಿತಿ ಉಪಾಧ್ಯಕ್ಷ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಶಶಿಧರ ಪೈ ವಂದಿಸಿದರು.

Related posts

ನಿಷೇದಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ: ಆರೋಪಿಗೆ ಶಿಕ್ಷೆ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಗೋಪಾಲ್ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಪೆರ್ನೆಯ ಯುವಕ ಯತೀಶ್ ಗೌಡ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ದ್ವಿತೀಯ ಸೋಪಾನ, ಗರಿ, ಚರಣ ಪರೀಕ್ಷೆ

Suddi Udaya
error: Content is protected !!