25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮೇ 13-21: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮೇ 13 ರಿಂದ ಮೇ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮೇ 13 ರಂದು ರಾತ್ರಿ ವಾಸ್ತು ಬಲಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಪೂಜೆ, ಕಿಲಮರಿತ್ತಾಯ ನೇಮ, ಧ್ವಜಾರೋಹಣ, ಮೇ 14 ರಂದು ಪೂರ್ವಾಹ್ನ ಪುಣ್ಯಾಹ, ಶಾಂತಿ ಹವನಗಳು, 12ಕಾಯಿ ಗಣಯಾಗ, ರಾತ್ರಿ ಜೋಡು ನೇಮ, ಕುದುರುಮುಖ ದೈವದ ನೇಮ, ಉಗ್ರಾಣ ತುಂಬಿಸುವುದು, ಅಂಕುರಾರ್ಪಣೆ, ದೇವರ ಉತ್ಸವ ಪ್ರಾರಂಭ, ಅಶ್ವತ್ಥಕಟ್ಟೆ ಪೂಜೆ, ಮೇ.15 ಪೂರ್ವಾಹ್ನ ಅಂಗಣೋತ್ಸವ, ರಾತ್ರಿ ದೇವರ ಉತ್ಸವ, ಬೆಳ್ಳಿ ಕಟ್ಟೆ ಪೂಜೆ, ಮೇ16 ರಂದು ಪೂರ್ವಾಹ್ನ ಅಂಗಣೋತ್ಸವ, ರಾತ್ರಿ ಉತ್ಸವ, ಸವಾರಿ ಮಂಟಪ ಕಟ್ಟೆ ಪೂಜೆ, ಮೇ 17 ಪೂರ್ವಾಹ್ನ ಅಂಗಣೋತ್ಸವ , ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಅಂಗಣೋತ್ಸವ, ಬಂಗರಕಟ್ಟೆ ಪೂಜೆ, ರಾತ್ರಿ 11 ರಿಂದ ಬೆಳಗಿನ ತನಕ ತುಳು ಯಕ್ಷಗಾನ ನಡೆಯಲಿದೆ.


ಮೇ 18 ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ ಮಹಾ ರಥೋತ್ಸವ, ಕವಾಟ ಬಂಧನ , ಮೇ. 19 ರಂದು ಕವಾಟೋದ್ಘಾಟನೆ , ಮಹಾಪೂಜೆ ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭೃತೋತ್ಸವ, ಧ್ವಜ ಅವರೋಹಣ, ಮೇ 20 ರಂದು ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ, ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ ನಡೆಯಲಿದೆ.


ಮೇ.21 ರಂದು ಪೂರ್ವಾಹ್ನ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ದಿನೇಶ್ ಎಂ. ತಿಳಿಸಿದ್ದಾರೆ.

Related posts

ಶಿರ್ಲಾಲು : ಮಜಲಪಲ್ಕೆ ನಿವಾಸಿ ಹರಿಶ್ಚಂದ್ರ ಪೂಜಾರಿ ರವರಿಗೆ ಬಿಜೆಪಿ ಗ್ರಾಮ ಸಮಿತಿಯ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Suddi Udaya

ಉಜಿರೆ ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ

Suddi Udaya

ಪದ್ಮುಂಜ: ವಾಹನ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮೂಡುಕೋಡಿ ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ಕೇಂದ್ರ ಖಿಳರ್ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಬಕ್ರೀದ್ ಆಚರಣೆ

Suddi Udaya
error: Content is protected !!