September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೃಷಿ ತೋಟಗಳಿಗೆ ಹಾನಿ ಮಾಡುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆಯಿಂದ ಜೋತಾಡುವ ಸೌರ ವಿದ್ಯುತ್ ಬೇಲಿ

ಬೆಳ್ತಂಗಡಿ: ಇತ್ತಿಚೀನ ದಿನಗಳಲ್ಲಿ ಕಾಡಾನೆಗಳ ನಿರಂತರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆನೆ ಕಂದಕ, ಸೋಲಾರ್ ಬೇಲಿ, ಕಾಂಕ್ರೀಟ್ ಬ್ಯಾರಿಕೇಡ್ ಸೇರಿದಂತೆ ಹಲವಾರು ಪ್ರಯೋಗಗಳನ್ನು ಮಾಡಿದರೂ, ಕಾಡಾನೆಗಳು ನಾಡಿಗೆ ಬಂದು ರೈತರ ಕೃಷಿಯನ್ನು ನಾಶ ಮಾಡುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ, ಈ ಹಿನ್ನಲೆಯಲ್ಲಿ ಹೇಗಾದರೂ ಮಾಡಿ ಆನೆಗಳನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ಇದೀಗ ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯ ಅನುಷ್ಠಾನಕ್ಕೆ ಮುಂದಾಗಿದೆ.


ದ.ಕ. ಜಿಲ್ಲೆಯ ಚಾರ್ಮಾಡಿ, ಮುಂಡಾಜೆ, ನೆರಿಯ, ಕಡಿರುದ್ಯಾವರ, ಶಿಶಿಲ, ಶಿಬಾಜೆ, ಶಿರಾಡಿ ಹಾಗೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಗಡಿಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಕೃಷಿಯ ಜತೆಗೆ ಅನೇಕ ಜೀವಹಾನಿಯೂ ಸಂಭವಿಸಿದೆ. ಈಗಾಗಲೇ ಇದನ್ನು ತಡೆಯಲು ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯನ್ನು ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿ ಎನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಪ್ರಯೋಗವಾಗಿ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಅನುಷ್ಠಾನಗೊಳಿಸಿದೆ ಎಂದು ವರದಿಯಾಗಿದೆ.


ಜೋತಾಡುವ ಬೇಲಿ ಹೇಗಿರುತ್ತದೆ:
ನೇತಾಡುವ ಸೋಲಾರ್ ಬೇಲಿಯು ಸುಮಾರು 14 ಅಡಿ ಎತ್ತರವಿದೆ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ೮೦ ಅಡಿ ದೂರ. ಕಂಬದ ಮೇಲ್ಬಾಗದಿಂದ ವಿದ್ಯುತ್ ತಂತಿಯಂತೆ ಎರಡೂ ಬದಿ ತಂತಿ ಹಾದು ಹೋಗುತ್ತದೆ. ಆ ತಂತಿಗೆ ಎರಡು ಬದಿಯಲ್ಲಿ ನೆಲದವರೆಗೆ ತಂತಿಯನ್ನು ಇಳಿಯಬಿಟ್ಟು ಸುಮಾರು 9 ವೋಲ್ಟ್ ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.


ತಂತಿ ಅಳವಡಿಕೆಗೆ ಕಂಬವನ್ನು ಕಾಂಕ್ರೀಟ್ ಅಡಿಪಾಯದಿಂದ ನಿರ್ಮಿಸುವುದರಿಂದ ಬಲಿಷ್ಠ ಹಾಗೂ ಸುದೀರ್ಘ ಬಾಳಿಕೆ ಬರುತ್ತದೆ. ಸೋಲಾರ್ ಪವರ್ ಜನರೇಟರನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ತಂತಿಯ ಸ್ಪರ್ಶವಾದಾಗ ಲಘು ವಿದ್ಯುತ್ ಆಘಾತವಾಗುವುದರಿಂದ ಆನೆಗಳು ಮತ್ತೊಮ್ಮೆ ಆ ದಾರಿಯಲ್ಲಿ ಬರಲು ಹಿಂಜರಿಯುತ್ತವೆ. ಈ ವಿದ್ಯುತ್‌ನಿಂದ ಆನೆಗಳ ಜೀವಕ್ಕೆ ಅಪಾಯವಿಲ್ಲ. ಅವುಗಳ ಚಲನವಲನ ದಾಖಲಿಸಲು ಸಿಸಿ ಕೆಮರಾವನ್ನೂ ಅಳವಡಿಸಲಾಗಿದೆ. ಆನೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶವೂ ರವಾನೆಯಾಗುತ್ತದೆ.

Related posts

ಎಸ್.ಡಿ.ಎಂ. ಸಂಸ್ಥೆಗಳ ಸಾಧನೆಗಳ ಅನಾವರಣ: ‘Institutions of Legacy’ಕಾಫಿ ಟೇಬಲ್ ಪುಸ್ತಕ ಹೆಗ್ಗಡೆಯವರಿಂದ ಲೋಕಾರ್ಪಣೆ

Suddi Udaya

ಡಿ.12ರಂದು ಬೆಳ್ತಂಗಡಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮಾಜಿ ಶಾಸಕ ದಿ. ಕೆ ವಸಂತ ಬಂಗೇರರವರ 78 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ, ಬಂಗೇರಾ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ,ಬಿನುತಾ ಬಂಗೇರರ ನೇತೃತ್ವದಲ್ಲಿ ಮದ್ದಡ್ಕ ಬಂಡೀಮಠ ಮೈದಾನದಲ್ಲಿ ಹೊನಲು ಬೆಳೆಕಿನ ಮುಕ್ತ ಕಬಡ್ಡಿ ಪಂದ್ಯಕೂಟ

Suddi Udaya

ಅನುಗ್ರಹ ಪ್ರೌಢಶಾಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಶ್ರೀಕೃಷ್ಣ ಜಯಂತಿ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಕೆ‌ ಧರಣೇಂದ್ರ ಜೈನ್ ಆಯ್ಕೆ

Suddi Udaya
error: Content is protected !!