24.7 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂಗೇರ‌ ಪಾಥಿ೯ವ ಶರೀರದ ಅಂತಿಮ ದಶ೯ನಕ್ಕೆ ಹರಿದು ಬಂದ ಜನ ಸಾಗರ: ಬೆಳ್ತಂಗಡಿ ನಗರದಲ್ಲಿ ಅಂತಿಮ ಯಾತ್ರೆ: ಹುಟ್ಟೂರು ಕೇದೆಯಲ್ಲಿ ಅಂತ್ಯಸಂಸ್ಕಾರ

ಬೆಳ್ತಂಗಡಿ: ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ, ನೇರ ನಡೆನುಡಿಯ, ದಿಟ್ಟ ಹೋರಾಟಗಾರ ಮಾಜಿ ಶಾಸಕ ಕೆ. ವಸಂತ ಬಂಗೇರ ಪಾಥಿ೯ವ ಶರೀರದ ಅಂತಿಮ ನಮನ ಕಾಯ೯ಕ್ರಮದಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆಗಳು ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ತಾಲೂಕು, ಹೊರ ತಾಲೂಕುಗಳಿಂದ ಆಗಮಿಸಿದ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು, ಬಂಗೇರರ ಅಭಿಮಾನಿಗಳು ಪಕ್ಷ, ಬೇಧ ಮರೆತು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.


ನಿನ್ನೆ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಬಂಗೇರ ಅವರ ಮೃತದೇಹವನ್ನು ರಾತ್ರಿ ಬೆಳ್ತಂಗಡಿಯ ಅವರ ಮನೆಗೆ ತರಲಾಯಿತು. ಇಂದು ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಇಂದು ಬೆಳಿಗ್ಗೆ ಹಳೆಕೋಟೆಯ ಅವರ ಮನೆಯಲ್ಲಿ ಜರುಗಿತು.
ಬಳಿಕ ಬೆಳ್ತಂಗಡಿಯ ನಗರದ ಮೂಲಕ ಪಾರ್ಥಿವ ಶರೀರವನ್ನು ತಾಲೂಕು ಕ್ರೀಡಾಂಗಣಕ್ಕೆ ತಂದು, ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನ ತನಕ ಅವಕಾಶ ಮಾಡಿ ಕೊಡಲಾಯಿತು. ಬೆಳ್ತಂಗಡಿ ನಗರದಲ್ಲಿ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಮಾಜಿ ಶಾಸಕರಿಗೆ ಗೌರವ ಸಲ್ಲಿಸಿದರು.


ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವರುಗಳಾದ ಗಂಗಾಧರ ಗೌಡ, ಅಭಯಚಂದ್ರ ಜೈನ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೃಷ್ಣ ಪಾಲೇಮಾರ್ , ಮಾಜಿ ಶಾಸಕರುಳಾದ ಶಕುಂತಲಾ ಶೆಟ್ಟಿ, ಸಂಜೀವ ಮಂಜೂರು, ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಎಸ್.ಪಿ ರೀಷ್ಯಂತ್, ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು, ಪೊಲೀಸ್ ಇಲಾಖೆಯ ಮುಖ್ಯಸ್ಥರು, ತಾಲೂಕು , ಹೊರ ತಾಲೂಕುಗಳಿಂದ ಗಣ್ಯರು, ನಾಗರಿಕರು, ಬಂಗೇರ ಅಭಿಮಾನಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಗೌರವ ಸಲ್ಲಿಸಲಾಯಿತು.
ಬಳಿಕ ತಾಲೂಕು ಕ್ರೀಡಾಂಗಣದಿಂದ ‌ಬೆಳ್ತಂಗಡಿ ನಗರದ ಮೂಲಕ ಹಳೇಕೋಟೆಯ ಅವರ ಮನೆ ತನಕ ಅಂತಿಮ ಯಾತ್ರೆ ನಡೆಯಿತು. ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಂಡರು.


ಕೇದೆಯಲ್ಲಿ ಅಂತ್ಯ ಸಂಸ್ಕಾರ: ವಸಂತ ಬಂಗೇರ ಅವರ ಹೂಟ್ಟೂರು ಕುವೆಟ್ಟು ಗ್ರಾಮದ ಕೇದೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳು, ಬಂಧು ವಗ೯ದವರ ಉಪಸ್ಥಿತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಸಂಜೆ ವೇಳೆ ಅವರ ಹುಟ್ಟೂರು ಕುವೆಟ್ಟು ಗ್ರಾಮದ ಕೇದೆಯಲ್ಲಿ ಅಂತಿಮ ಸಂಸ್ಕಾರ ನಡೆಯಿತು . ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್, ಕಾಮಗ್ರೆಸ್ ಅಭ್ಯರ್ಥಿ ಪದ್ಮರಾಜ್, ಶಾಸಕ ಹರೀಶ್ ಪೂಂಜ, ರಕ್ಷಿತ್ ಶಿವರಾಂ, ವಸಂತ ಸಾಲಿಯಾನ್, ಪ್ರಶಾಂತ್ ಪ್ರತಿಮಾನಿಲಯ, ಜಯಂತ ಕೋಟ್ಯಾನ್, ಮುಗುಳಿ ನಾರಾಯಣ ರಾವ್, ಜಯವಿಕ್ರಮ್, ಪದ್ಮನಾಭ ಮಾಣಿಂಜ, ನಿತೀಶ್ ಕೋಟ್ಯಾನ್, ಸಂತೋಷ್‌ಕುಮಾರ್ ಕಾಪಿನಡ್ಕ, ಧರಣೇಂದ್ರ ಕುಮಾರ್, ಮನೋಹರ ಇಳಂತಿಲ, ಶೇಖರ ಕುಕ್ಕೇಡಿ, ಯೋಗೀಶ್ ಕುಮಾರ್ ನಡಕರ, ಜೈಸನ್, ರಾಜೇಶ್ ಮೂಡುಕೋಡಿ, ಡಾ.ರಾಜರಾಮ್, ಜಗದೀಶ್ ಡಿ. ರಾಜಶೇಖರ ರೈ, ಚಿದಾನಂದ ಇಡ್ಯ, ಸತೀಶ್ ಕಾಶಿಪಟ್ಣ, ರತ್ನಾಕರ ಬುಣ್ಣನ್, ವಸಂತ ಬಿ.ಕೆ, ಜಯಾನಂದ ಲಾಯಿಲ, ಡಾ.ಜಗನ್ನಾಥ್, ಡಾ. ಸುಧೀರ್ ಪ್ರಭು ಸೇರಿದಂತೆ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Related posts

ಕಲ್ಲೇರಿ: ಕಾರು ಮತ್ತು ಸ್ಕೂಟಿಯ ನಡುವೆ ಭೀಕರ ರಸ್ತೆ ಅಪಘಾತ: ಓರ್ವ ಮೃತ್ಯು

Suddi Udaya

ಓಡಿಲ್ನಾಳ 149 ಬೂತ್ ಸಮಿತಿ ಅಧ್ಯಕ್ಷರಾಗಿ ಉಮೇಶ್ ಕುಲಾಲ್, ಕಾರ್ಯದರ್ಶಿಯಾಗಿ ಸಂತೋಷ್ ಆರ್ ಗೌಡ ಆಯ್ಕೆ

Suddi Udaya

ಸಾವ್ಯ: ನೂಜಿಲೋಡಿಯಲ್ಲಿ ಮನೆಗೆ ನುಗ್ಗಿದ್ದ ಕಳ್ಳರು: ರೂ.2.15ಲಕ್ಷ ಮೌಲ್ಯದ ಸೊತ್ತುಗಳ ಕಳವು

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya
error: Content is protected !!