23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾಮಾ೯ಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ವಾಹನ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎಂಟು ಒಂಬತ್ತನೇ ತಿರುವಿನ ಮಧ್ಯೆ ಒಂಟಿ ಸಲಗ ಭಾನುವಾರ ರಾತ್ರಿ ಮತ್ತೆ ಕಂಡುಬಂದಿದೆ.
ಭಾನುವಾರ ರಾತ್ರಿ 8ರ ಸುಮಾರಿಗೆ ಕಾಡಾನೆ ರಸ್ತೆಯ ತೀರಾ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.

ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಓಡಾಟ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ಘಾಟಿ ಪ್ರದೇಶದಲ್ಲಿ ಹಗಲು ಹೊತ್ತು ಕಂಡುಬಂದಿತ್ತು.
ಘಾಟಿ ಪರಿಸರದಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು ಮಂಜು ಕವಿದ ವಾತಾವರಣವು ಇದ್ದು ಆನೆ ಇರುವುದು ತೀರ ಸಮೀಪಕ್ಕೆ ಬರುತ್ತಿದ್ದಂತೆ ವಾಹನ ಸವಾರರಿಗೆ ತಿಳಿದುಬಂದಿತ್ತು. ಆನೆ ಕಂಡ ಜೀಪು ಚಾಲಕನೋರ್ವ ಗಲಿಬಿಲಿಗೊಂಡ ಕಾರಣ ಆನೆಯ ಸಮೀಪವೇ ವಾಹನ ಚರಂಡಿಗೆ ಇಳಿದ ಘಟನೆಯು ನಡೆಯಿತು.

ಕಾಡಾನೆ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ತಿಳಿದುಬಂದಿದೆ

Related posts

ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಪೂಜೆ: ಫೆ.9 ರಿಂದ 12 ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ: ಹೆಚ್ಚುವರಿ ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

Suddi Udaya
error: Content is protected !!