23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೆಕ್ಕಾರು- ಬಾರ್ಯ ಗಡಿಭಾಗದ ಸರಳಿಕಟ್ಟೆಯಿಂದ ಕಲ್ಲೇರಿ-ಗೋದಾಮುಗುಡ್ಡೆಯವರೆಗೆ ಸಂಪೂರ್ಣ ಹದಗೆಟ್ಟ ರಸ್ತೆ

ತೆಕ್ಕಾರು: ತೆಕ್ಕಾರು- ಬಾರ್ಯ ಗ್ರಾಮದ ಗಡಿಭಾಗದ ಸರಳಿಕಟ್ಟೆಯಿಂದ ಕಲ್ಲೇರಿ-ಗೋದಾಮುಗುಡ್ಡೆ ರಸ್ತೆಯನ್ನು ಸಂಪರ್ಕಿಸುವ ರಸ್ತೆ( ತೋಡಿನಂತಿರುವ) ಡಾಂಬಾರು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಳೆದ ಐದು ವರ್ಷಗಳಿಂದ ಕಲ್ಲು ಮತ್ತು ಮಣ್ಣು ಹಾಕಿ ಊರವರು ಅಲ್ಪ ಸ್ವಲ್ಪ ರಿಪೇರಿ ಮಾಡುತ್ತಾ ಬರುತ್ತಿದ್ದು, ಗ್ರಾಮ ಪಂಚಾಯತಿಯಿಂದ ಹಿಡಿದು ಶಾಸಕರಿಗೆ ಹಲವಾರು ಬಾರಿ ಈ ಬಗ್ಗೆ ತಿಳಿಸಿದ್ದರೂ ಯಾರೊಬ್ಬರೂ ಇದರ ತಲೆಕೆಡಿಸಿಕೊಳ್ಳದೇ ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮವಾಗಿ ಇದೀಗ ರಸ್ತೆಯು ಗೋಂವಿದರಗುಳಿಯಿಂದ ಸರಳಿಕಟ್ಟೆಗೆ ಸಂಪರ್ಕಿಸುವ ತೋಡಿನಂತಾಗಿದ್ದು, ವಾಹನ ಸವಾರರು ಹರಸಾಹಸಪಡುತ್ತಾ ಸಂಚರಿಸುವ ದುಸ್ಥಿತಿಗೆ ತಲುಪಿದೆ.

ಈ ರಸ್ತೆಯ ದುಸ್ಥಿತಿಯ ಬಗ್ಗೆ ಈ ಭಾಗದ ರಾಜಕೀಯ ನಾಯಕರು ಅಥವಾ ಈ ಭಾಗದ ಜನರ ಪರವಾಗಿ ತೆಕ್ಕಾರು ಹಾಗೂ ಬಾರ್ಯ ಗ್ರಾಮ ಪಂಚಾಯತಿಗಳು ಜಂಟಿಯಾಗಿ ಒಕ್ಕೊರಲಿನಿಂದ ಶಾಸಕರು ಅಥವಾ ಲೋಕೊಪಯೋಗಿ ಇಲಾಖೆಯ ಗಮನಕ್ಕೆ ತಂದರೆ ಶೀಘ್ರದಲ್ಲೇ ರಸ್ತೆಯ ದುಸ್ಥಿತಿಯಿಂದ ಮುಕ್ತಿಯಾಗಬಹುದು ಎಂದು ನೊಂದ ವಾಹನ ಸವಾರರು ತಿಳಿಸಿದರು.

Related posts

ಇಂದು ಕಾಶಿ ಬೆಟ್ಟುನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಮೇ.3 : ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಕೊಕ್ಕಡ: ಹಳ್ಳಿಂಗೇರಿ ನಿವಾಸಿ ದಿನೇಶ್ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಸಭೆ

Suddi Udaya

ಕಳೆಂಜ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಸೋರುತಿದ್ದ ಮನೆಯ ಮೇಲ್ಛಾವಣಿಗೆ ಟಾರ್ಪಲ್ ಅಳವಡಿಕೆ

Suddi Udaya
error: Content is protected !!