25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

ಚಾಮಾ೯ಡಿ: ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಆಗಾಗ ಕಂಡು ಬರುತ್ತಿದ್ದು ವಾಹನ ಸವಾರರಲ್ಲಿ ಭೀತಿಯ ವಾತಾವರಣ ಮೂಡಿದೆ. ಭಾನುವಾರ ರಾತ್ರಿ ಒಂದನೇ ತಿರುವಿನ ಸಮೀಪ ಕಾಡಾನೆ ಕಂಡುಬಂದಿತ್ತು‌.ಬಳಿಕ ಸೋಮವಾರ ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಬಳಿಯು ಕಾಡಾನೆಯನ್ನು ವಾಹನ ಸವಾರರು ಕಂಡಿದ್ದಾರೆ ಮಂಗಳವಾರ ಬೆಳಿಗ್ಗೆ 2ನೇ ತಿರುವಿನ ಬಳಿ ಆನೆ ರಸ್ತೆ ಮಧ್ಯೆ ನಿಂತು ಈಚಲ ಮರವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಈ ಹಿಂದೆಯೂ ಎರಡು ಮೂರು ಬಾರಿ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಪ್ರಸ್ತುತ ಕಾಡಾನೆ ಪದೇ ಪದೇ ಘಾಟಿ ರಸ್ತೆ ವ್ಯಾಪ್ತಿಯಲ್ಲಿ ಕಾಣಿಸುತ್ತಿದೆ ಪ್ರತಿದಿನ ಸಾವಿರಾರು ವಾಹನಗಳು ಓಡಾಟ ನಡೆಸುವ ಇಲ್ಲಿ ಕಾಡಾನೆ ರಸ್ತೆ ಬದಿ ಕಂಡುಬರುವುದರಿಂದ ಹಲವು ಕಾಲ ವಾಹನಗಳು ಸರದಿ ನಿಲ್ಲಬೇಕಾದ ಸ್ಥಿತಿ ಇದೆ ಹಾಗೂ ಈ ಹೊತ್ತಿನಲ್ಲಿ ಜೀವ ಭಯದೊಂದಿಗೆ ಕಾಯಬೇಕು.

ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ಕಂಡು ಬರುತ್ತಿದ್ದು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ. ಇದುವರೆಗೆ ಕಾಡಾನೆ ವಾಹನ ಅಥವಾ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ‌ ಆದರೆ ಕೆಲವು ವರು ಆನೆಯನ್ನು ಓಡಿಸುವ ಸಲುವಾಗಿ ಕಲ್ಲುಗಳನ್ನು ಬೀರುವುದು, ಫೋಟೋ ಕ್ಲಿಕ್ಕಿಸಲು ಮುಂದಾಗುವುದು, ಬೊಬ್ಬೆ ಹಾಕುವುದು ಇತ್ಯಾದಿ ಮಾಡುತ್ತಾರೆ‌. ಇದರಿಂದ ಆನೆ ಕೋಪಗೊಳ್ಳುವ ಸಂಭವವಿದ್ದು, ಈ ಸಮಯ ಜನ ವಾಹನದ ಮೇಲೆ ದಾಳಿಗೂ ಮುಂದಾಗಬಹುದು.

ಒಟ್ಟಿನಲ್ಲಿ ಘಾಟಿ ಪ್ರಯಾಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿದ್ದು ರಾತ್ರಿ ಪ್ರಯಾಣವನ್ನು ಆದಷ್ಟು ಮುಂದೂಡಿದರೆ ಉತ್ತಮ.

Related posts

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ: ಹಸಿರು ವಾಣಿ ಮತ್ತು ಪುಷ್ಪಗನ್ನಡಿ ಸಮರ್ಪಣೆ

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ: ಶ್ರೀ ಧ.ಮಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯ

Suddi Udaya

ತೆಕ್ಕಾರು ಗ್ರಾ.ಪಂ ನಲ್ಲಿ ರೈತರಿಗೆ ಅಣಬೆ ಕೃಷಿ ತರಬೇತಿ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಯ್ಯೂರು ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!