38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕ್ಷೇತ್ರ ಭೇಟಿ

ಬಳಂಜ : ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಸಮಾಜಕಾರ್ಯ ವಿಭಾಗದ ವತಿಯಿಂದ ಮೇ 15 ರಂದು ಬಳಂಜ ಫಾರ್ಮ್ಸ್ ಮತ್ತು ನರ್ಸರಿಗೆ ಶೈಕ್ಷಣಿಕ ಕ್ಷೇತ್ರ ಭೇಟಿ ನೀಡಿದರು.

ಬಳಂಜ ಸಮೀಪದ ಬಳಂಜ ಫಾರ್ಮ್‌ ಮತ್ತು ನರ್ಸರಿಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಅನಿಲ್ ಬಳಂಜ ವಿದ್ಯಾರ್ಥಿಗಳಿಗೆ ಬಳಂಜ ಫಾರ್ಮ್‌ನಲ್ಲಿರುವ ವಿವಿಧ ಸಸ್ಯಗಳು, ಹಣ್ಣಿನ ಗಿಡಗಳು ಮತ್ತು ಕೃಷಿ ಪದ್ದತಿಯನ್ನು ಪರಿಚಯ ಮಾಡಿಕೊಟ್ಟರು . ಸುಮಾರು 35 ಎಕರೆಗಳಷ್ಟು ವಿಸ್ತೀರ್ಣದ ಬಳಂಜ ಫಾರ್ಮ್‌ನಲ್ಲಿ 60 ದೇಶಗಳ ಬಹು ಅಪರೂಪದ 80 ಕ್ಕೂ ಅಧಿಕ ತಳಿಗಳ ಸಸ್ಯಗಳು ಹಾಗೂ ಹಣ್ಣಿನ ಗಿಡಗಳು ವಿಶೇಷವಾಗಿದ್ದವು. ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಸ್ವಾತಿ , ಅಕ್ಷತಾ ಕೆ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕ್ಷಮಾ ವಂದಿಸಿದರು.

Related posts

ವೇಣೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

Suddi Udaya

ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಆಸರೆ 3ನೇ ಮನೆ ಹಸ್ತಾಂತರ

Suddi Udaya

ಹೆದ್ದಾರಿ ಬದಿ ಬೆಂಕಿ

Suddi Udaya

ಮಾಲಾಡಿ: ಕೊಲ್ಪದಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Suddi Udaya

ಬಳಂಜ: ನಾಲ್ಕೂರು ಕೃಷಿಕ ಕರಿಯ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya

ಮಾ.10: ಸಿರಿ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ “ಉಚಿತ ಆರೋಗ್ಯ ತಪಾಸಣಾ ಶಿಬಿರ”

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ