September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು : ಕೋಯನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಝೀನತ್‌ರವರಿಂದ ಜಾರುಬಂಡಿ ಕೊಡುಗೆ


ಇಂದಬೆಟ್ಟು ಗ್ರಾಮದ ಕೋಯನಗರ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಅಂಗನವಾಡಿ ಸ್ಥಾಪನೆಗಾಗಿ ಶ್ರಮಿಸಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಮಹಿಳಾ ಉದ್ಯಮಿಯಾದ ಝೀನತ್ ಉಜಿರೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಇವರು ಅಂಗನವಾಡಿ ಕೇಂದ್ರಕ್ಕೆ ಜಾರುಬಂಡಿಯನ್ನು ಕೊಡುಗೆಯಾಗಿ ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಅಶ್ವಿನಿ, ಎಂ.ಜೆ.ಎಂ. ಕಿಲ್ಲೂರು ಇದರ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಝೀನತ್ ರವರ ಮಾತಾ ಪಿತೃಗಳಾದ ಖತೀಜಮ್ಮ, ಅಹಮದ್ ಕುಂಞಿ, ಊರಿನ ಗಣ್ಯರಾದ ಮಹಮ್ಮದ್ ಶ್ರವಣಗುಂಡ, ಅಶ್ರಫ್ ಶ್ರವಣಗುಂಡ, ಇಸುಬು ಕಿಲ್ಲೂರು, ಹಂಝತ್ ಕಿಲ್ಲೂರು, ಉದಯ ಪಡೆಂಕಲ್, ನೇಮಿರಾಜ್ ಕಿಲ್ಲೂರು, ಬದ್ರುದ್ದೀನ್ ಕೋಯನಗರ, ಬಿ.ಎಸ್. ಉಮ್ಮರ್ ಟಿಂಬರ್ ಮರ್ಚೆಂಟ್, ಕುಂಞಿ ಮೋನು ಶ್ರವಣಗುಂಡ, ನವಾಜ್, ಇಮ್ತಿಯಾಜ್, ಮಿಯಾಜ್, ಉಮರ್ ಫಾರೂಕ್ ಉಜಿರೆ ಮತ್ತು ಬಾಲವಿಕಾಸ ಸಮಿತಿ ಸದಸ್ಯರು, ಚೇತನ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ಊರಿನ ಗಣ್ಯರು, ಮಹಿಳೆಯರು, ಅಂಗನವಾಡಿ ಪುಟಾಣಿಗಳು ಭಾಗವಹಿಸಿದ್ದರು.

ಅಶ್ರಫ್ ಹಾಗೂ ನೇಮಿರಾಜ್ ಕಿಲ್ಲೂರು ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಹಾಗೂ ಸಹಾಯಕಿ ಗುಲ್ಜಾರ್ ಬಿ ಸಹಕರಿಸಿದರು.

Related posts

ಕಲಾಕುಂಚ ಆರ್ಟ್ಸ್ ನಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ಉಜಿರೆ ಓಡಲ ಕೆದ್ಲ ಸುಬ್ರಹ್ಮಣ್ಯ ನಗರ ನಾಗ ಬನದಲ್ಲಿ ಹಾಲಭಿಷೇಕ, ತಂಬಿಲ ವಿಶೇಷ ಪೂಜೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕ ಜೆ.ಆರ್ ಲೋಬೋ

Suddi Udaya

ಸೋಣಂದೂರು: ಕಿರು ಸೇತುವೆ ಕುಸಿತ : ಸಬರಬೈಲು-ಪಡಂಗಡಿ ಸಂಪರ್ಕ ರಸ್ತೆ ಸ್ಥಗಿತ

Suddi Udaya

ರಕ್ತೇಶ್ವರಿಪದವು ಶಾಲಾ ಹಳೆ ವಿದ್ಯಾರ್ಥಿಗಳಿಂದ ಹದಗೆಟ್ಟ ರಸ್ತೆ ದುರಸ್ತಿ ಶ್ರಮದಾನ

Suddi Udaya

ಬೆಳ್ತಂಗಡಿ: ಈದ್ ಮಿಲಾದ್ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ

Suddi Udaya
error: Content is protected !!