23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ: ಕೇಡೇಲು ಪರಿಸರಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

ಸುಲ್ಕೇರಿ: ಸುಲ್ಕೇರಿ ಗ್ರಾಮದ ತೀರಾ ಹಿಂದುಳಿದ ಪ್ರದೇಶವಾದ ಕೇಡೇಲು ಪರಿಸರಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಮೇ 14 ರಂದು ಖಾಸಗಿ ಭೇಟಿ ನೀಡಿದರು.


ಸೆಲ್ಕೋ ಸಂಸ್ಥೆಯ ಗುರುಪ್ರಸಾದ್ ಶೆಟ್ಟಿ, ಉದಯ, ಗಿರಿಜಾ, ಸುರೇಶ್, ಗಿರೀಶ್ ಗೌಡ, ಕೆಂಪರಾಜು, ನವೀನ್ ನೆರಿಯ ಇವರ ಜತೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಕೆಲವು ಮನೆಗಳಿಗೆ ಭೇಟಿ ನೀಡಿದರು.


ಕೇಡೇಲು ಪರಿಸರದಲ್ಲಿ ಏಳು ಮನೆಗಳಿದ್ದು ಇಲ್ಲಿಗೆ ಸರಿಯಾದ ರಸ್ತೆ ಹಾಗು ವಿದ್ಯುತ್ ವ್ಯವಸ್ಥೆ ಕೂಡ ಇರುವುದಿಲ್ಲ.ಇಲ್ಲಿನ ಜನಜೀವನ ಕುರಿತು ವೀಕ್ಷಿಸಿ, ಮಾತನಾಡಿ “ನಮ್ಮ ನಿರ್ಧಾರಗಳು ಕಟ್ಟ ಕಡೆಯ ವ್ಯಕ್ತಿಗಳ ಜೀವನಕ್ಕೆ ಬೆಳಕಾಗಬೇಕು. ಅಂತಹ ವ್ಯವಸ್ಥೆಯನ್ನು ಇಲ್ಲಿ ಸೆಲ್ಕೋ ಸಂಸ್ಥೆ ನಿರ್ವಹಿಸಿರುವುದು ಶ್ಲಾಘನೀಯ. ಆಯ್ಕೆ ಮಾಡಿಕೊಳ್ಳುವ ಕಾರ್ಯಗಳಿಂದ ಜನರಿಗೆ ಉಪಯೋಗವಾದರೆ ಮಾಡಿದ ಕೆಲಸದಲ್ಲಿ ತೃಪ್ತಿ ಸಿಗುತ್ತದೆ” ಎಂದರು.

Related posts

ಗುರುವಾಯನಕೆರೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ.

Suddi Udaya

ಶಿಶಿಲ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

Suddi Udaya

ವಾಯುಭಾರ ಕುಸಿತ: ತಾಲೂಕಿನದ್ಯಾಂತ ವ್ಯಾಪಕ ಮಳೆ-ರೆಡ್ ಅಲರ್ಟ್; ಮುಂಡಾಜೆಯಲ್ಲಿ103 ಮಿ.ಮೀ.ಮಳೆ

Suddi Udaya

ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ಸರ್ವಾರ್ಥ್ ಎಸ್. ಜೈನ್‌ ವೇಣೂರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ

Suddi Udaya
error: Content is protected !!