38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಭಾರತ್ ಬೀಡಿ ಕಂಪೆನಿ ಉಳಿಸಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

ಬೆಳ್ತಂಗಡಿ: 2500 ಅಧಿಕೃತ 2500 ಅನಧಿಕೃತ ಒಟ್ಟು 5000 ಕಾರ್ಮಿಕರನ್ನು ಹೊಂದಿದ ಬೆಳ್ತಂಗಡಿಯಲ್ಲಿರುವ ಭಾರತ್ ಬೀಡಿ ಕಂಪೆನಿಯನ್ನು ಮುಚ್ಚಲು ಸರಕಾರ‌ ಅನುಮತಿ ಕೊಡಲು ಬಿಡುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ‌‌ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಭರವಸೆ ನಿಡಿದರು. ಅವರು ಇಂದು ಭಾರತ್ ಬೀಡಿ ಕಂಪೆನಿ ಉಳಿಸಿ ಎಂದು ಭಾರತ್ ಬೀಡಿ ಕಂಪೆನಿ ಬೆಳ್ತಂಗಡಿ ಎದುರು ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ಮಾತಾಡುತ್ತಿದ್ದರು.

ಸರಕಾರದ ಅನುಮತಿ ಇಲ್ಲದೆ ಮುಚ್ಚಲು ಅಥವಾ ಶಿಫ್ಟ್ ಮಾಡಲು ಹೊರಟಿರುವುದು ಬೀಡಿ ಮಾಲಕರ ಕಾನೂನು ಬಾಹಿರ ನಡೆ. ಇದನ್ನು ಸರಕಾರ ಸಹಿಸುವುದಿಲ್ಲ. ಕಾರ್ಮಿಕ ಸಚಿವರ ಗಮನಕ್ಕೆ ತಂದು ಕಂಪೆನಿ ಉಳಿಸುವ ಕೆಲಸ ಮಾಡುತ್ತೇನೆ ಹಾಗೂ ಅದಕ್ಕಾಗಿ ಹೋರಾಡುವ ನಿಮ್ಮ ಜೊತೆ ನಾನು ಬೆಂಬಲಿಕ್ಕಿದ್ದೇನೆ ಎಂದು ಕಾರ್ಮಿಕರಿಗೆ ಅಭಯ ನೀಡಿ ಮಾತಾಡಿದರು.

ಧರಣಿಯನ್ನು ಉದ್ಘಾಟಿಸಿ ಮಾತಾಡಿದ ಬೀಡಿ ಫೆಡರೇಶನ್ ನ ರಾಜ್ಯ ಅದ್ಯಕ್ಷರಾದ ಜೆ ಭಾಲಕೃಷ್ಣ ಶೆಟ್ಟಿ ಮಾತಾಡುತ್ತಾ ಸರಕಾರದ ಅನುಮತಿ ಇಲ್ಲದೆ ಭಾರತ್ ಬೀಡಿ ಕಂಪೆನಿ ಮುಚ್ಚುವ ಅಥವಾ ಶಿಫ್ಡ್ ಮಾಡುವ ಮೂಲಕ ಬ್ರಾಂಚು ಮುಚ್ಚುವ ಭಾರತ್ ಬೀಡಿ ಕಂಪೆನಿಯ ಬ್ರಾಂಚನ್ನು ಬೆಳ್ತಂಗಡಿಯಲ್ಲಿ ಮುಚ್ಚುವ/ ಶಿಫ್ಟಿನ ಹೆಸರಲ್ಲಿ ಮುಚ್ಚುವ ಬೀಡಿ ಮಾಲೀಕರ ಧೋರಣೆ ಕಾನೂನಿನ ಸ್ಪಷ್ಟ ಉಲ್ಲಂಘನೆ ಹಾಗೂ ಸರಕಾರಕ್ಕೆ ಮಾಡುವ ಅವಮಾನ ಎಂದು ಹೇಳಿದರು. ಈ ವರ್ಷದ ಡಿ.ಎ. ಯನ್ನೂ ನೀಡದ ಮಾಲಕರು ಕಾರ್ಮಿಕರನ್ನು ಶೋಷಿಸುವ ಮಾಲಕರ ನಡೆಯ ವಿರುದ್ದ‌ ಸರಕಾರ ಮದ್ಯೆ ಪ್ರವೇಶ ಮಾಡಬೇಕಿದೆ ಎಂದರು.

ಈ ಸಂದರ್ಭ ಮಾತಾಡಿದ ರಾಜ್ಯ ಬೀಡಿ ಫೆಡರೇಶನ್ ಕಾರ್ಯದರ್ಶಿ ಸಯ್ಯದ್ ಮುಜೀಬ್ ಅವರು, ಕಾನೂನು ಬದ್ದ ಸವಲತ್ತುಗಳ ನೀಡದೆ ವಂಚಿಸುತ್ತಾ ಬಂದ ಬೀಡಿ ಮಾಲಕರು ಇದೀಗ ಕಂಪೆನಿ‌ ಮುಚ್ಚಲು ಹೊರಟು ಬೀಡಿ ಕಾರ್ಮಿಕರ ಬದುಕನ್ನು‌ಹೊಸಕಿ ಹಾಕಲು ಹೊರಟಿದ್ದಾರೆ ಎಂದರು. ಗ್ರಾಚ್ಯುವಿಟಿಯಂತಹ ಕಾನೂನು ಬದ್ದ ಸವಲತ್ತನ್ನೇ ನೀಡದೆ‌ ವಂಚಿಸುತ್ತಿರುವ ಈ ಮಾಲಕರ ಸರ್ವಾಧಿಕಾರ ನಡೆಯನ್ನು ಸರಕಾರ ನಿಲ್ಲಿಸಬೇಕಿದೆ. ಮೊದಲೇ ಕೇಂದ್ರ ಸರಕಾರ ಬೀಡಿ & ಸಿಗಾರ್‌‌ ಕಾಯ್ದೆಯನ್ನೇ ರದ್ದು ಪಡಿಸಿ ಕಾರ್ಮಿಕ‌ ಸಂಹಿತೆ ತರಲು ಹೊರಟು ಕಾರ್ಮಿಕರ ಶೋಷಿಸಲು ಮಾಲಕರಿಗೆ ಅನುವು ಮಾಡಿ ಕೊಡುತ್ತಿದೆ. ಈ ಸಂದರ್ಭ ನಮ್ಮ ಸಮರ‌ ಶೀಲ ಹೋರಾಟ ಅನಿವಾರ್ಯವಾಗಿದೆ ಮತ್ತು ಈ ಕಂಪೆನಿ ಉಳಿಸಲು ರಾಜ್ಯ ಫೆಡರೇಶನ್ ಸಿಐಟಿಯು ನಿಮ್ಮ‌ ಜೊತೆಗೆ ಇದೆ ಎಂದು ಹೇಳಿದರು.

ಈ ಸಂದರ್ಭ ಮಾತಾಡಿದ ಸಂಘದ ಅದ್ಯಕ್ಷ ಬಿ.ಎಂ.ಭಟ್ ಅವರು ಸರಕಾರಕ್ಕೆ ಗೌರವ ನೀದ ಹಾಗೂ ದೇಶದ ಕಾನೂನು ಪಾಲನೆ ಮಾಡದ ಕಂಪೆನಿಯ ನಡೆ ದೇಶದ್ರೋಹಕ್ಕೆ ಸಮ ಎಂದರು. ಗ್ರಾಚ್ಚುವಿಟಿ ಕೇಳಿದರೆ ಡಿ.ಎ.‌ಕೇಳಿದರೆ ಕಾನೂನು ಬದ್ದ ವೇತನ ಕೇಳಿದರೆ ಕಾರ್ಮಿಕರ ಕಿರಿ ಕಿರಿ ಎನ್ನುವ ಮಾಲಕರೇ ನಿಮ್ಮ ಹೆತ್ತು ಬೆಳೆಸಿದ ತಾಯಂದಿರ ಬೀದಿ ಪಾಲು ಮಾಡಲು ಹೊರಡುವುದು ನಿಮಗೆ ಶೋಭೆ ತರದು ಎಂದರು. ನ್ಯಾಯ ಸಿಗದಿದ್ದರೆ ಈ ಹೋರಾಟ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ಮೂಲಕ ಉಗ್ರವಾದ ಸ್ವರೂಪ ಪಡೆಯಲಿದೆ ಎಂದು ಸಾರಿದರು. ಸರಕಾರಕ್ಕಿಂತ ತಾನು ಮೇಲೆಂದು ಮೆರೆಯುವ ಬೀಡಿ ಮಾಲಕರಿಗೆ ಕಂಪೆನಿ ಬಂದ್ ಮಾಡದಂತೆ ಸರಕಾರ ಸೂಚಿಸಬೇಕೆಂದು ಹೇಳಿದರು.

ಈ ಸಂದರ್ಭ ಬೀಡಿ ಗುತ್ತಿಗೆದಾರ ಸಂಘದ ಮುಖಂಡರುಗಳಾದ ಸಿ ಮಹಮ್ಮದ್ , ಕಕ್ಕನಾಜೆ ಶಿವಾನಂದ ರಾವ್ ಮಾತಾಡಿದರು. ಹೋರಾಟದ ನಾಯಕತ್ವದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರಿ ಶಂಕರ್ ಪದ್ಮುಂಜ, ನೆಬಿಸಾ, ಜಯಶ್ರೀ, ಪುಷ್ಪಾ, ವಿಶ್ವಾನಾಥ ಶಿಬಾಜೆ, ಜಯರಾಮ ಮಯ್ಯ, ಅಶ್ವಿತ, ಉಷಾ, ರಾಮಚಂದ್ರ, ಶ್ರೀಧರ ಮುದ್ದಿಗೆ, ಅಬಿಷೆಕ್ ಪದ್ಮುಂಜ, ರಮೇಶ್ ಕೊಕ್ಕಡ, ಮೊದಲಾದವರು ಇದ್ದರು.

Related posts

ತಣ್ಣೀರುಪಂತ, ಬಾರ್ಯ, ತೆಕ್ಕಾರು ಜನಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ: ಶಾಸಕ ಹರೀಶ್ ಪೂಂಜರಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಭಾರಿ ಮಳೆಗೆ ಅರಸಿನಮಕ್ಕಿಯ ಕಾನದಲ್ಲಿ ಗುಡ್ಡದಿಂದ ರಭಸವಾಗಿ ಬಂದ ನೀರಿನಿಂದ ಮನೆಗೆ ಹಾನಿ

Suddi Udaya

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸೂಚನೆ: ಇ-ಕೆವೈಸಿ ಮಾಡಲು ಡಿ.31 ಕೊನೆಯ ದಿನ

Suddi Udaya

ಕಾಂಗ್ರೇಸ್ ಸರ್ಕಾರದಿಂದ ಕಾನೂನುವ್ಯವಸ್ಥೆಯ ಅಪಹಾಸ್ಯ :ಬೆಳ್ತಂಗಡಿ ಬಿಜೆಪಿ ಮಂಡಲ ಆಕ್ರೋಶ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತಕೋತ್ತರ ಕಾಲೇಜಿನಲ್ಲಿ ಮಹಿಳಾ ಉದ್ಯಮಿಗಳ ಅವಕಾಶಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಕ್ಯಾಂಡಿಡ್ ಟಾಕ್ ಕಾರ್ಯಕ್ರಮ

Suddi Udaya

ನಾವೂರು: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!