November 27, 2024
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮರೋಡಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಧರಾಶಾಯಿ: ಗಾಳಿ ಮಳೆ ಮೆಸ್ಕಾಂಗೆ 5 ಲಕ್ಷ ರೂ. ನಷ್ಟ

ಬೆಳ್ತಂಗಡಿ: ಬುಧವಾರ ಸಂಜೆ ಬೆಳ್ತಂಗಡಿ, ಅಳದಂಗಡಿ, ನಾರಾವಿ, ಕುದ್ಯಾಡಿ, ಮರೋಡಿ ಮೊದಲಾದ ಕಡೆಗಳಲ್ಲಿ ಮಳೆಯೊಂದಿಗೆ ಗಾಳಿಯು ಬೀಸಿದ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕ ನೆಲಕ್ಕುರುಳಿ ಮೆಸ್ಕಾಂಗೆ ರೂ.5 ಲಕ್ಷ ನಷ್ಟ ಉಂಟಾಗಿದೆ.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ನಾರಾವಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 4 ಎಚ್‌ ಟಿ, 7 ಎಲ್ ಟಿ ಕಂಬಗಳು ಮುರಿದುಬಿದ್ದು ಪರಿಸರದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು. ನಾರಾವಿಯ ಮರೋಡಿ ರಸ್ತೆಯಲ್ಲಿ 25 ಕೆವಿ ಸಾಮರ್ಥ್ಯದ ಪರಿವರ್ತಕ ಧರಾಶಾಯಿಯಾಯಿತು. ಪರಿವರ್ತಕ ಅಳವಡಿಸಿದ್ದ ಕಂಬಗಳು ಮುರಿದುಬಿದ್ದವು. ವಿದ್ಯುತ್ ವ್ಯತ್ಯಯ ಉಂಟಾದ ಕಡೆಗಳಲ್ಲಿ ಮೆಸ್ಕಾಂ ಮರು ಸಂಪರ್ಕ ನಿರ್ಮಿಸಿಕೊಡುವ ಕಾಮಗಾರಿ ನಡೆಸಿದೆ..

ರಸ್ತೆಗೆ ಬಿದ್ದ ಮರ-
ಬೆಳ್ತಂಗಡಿ ಸಂತೆಕಟ್ಟೆಯ ಕುತ್ಯಾರು ರಸ್ತೆಯಲ್ಲಿ ಬುಧವಾರ ರಾತ್ರಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಮರ ಬೀಳುವ ವೇಳೆ ಜನ, ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಮೆಸ್ಕಾಂ ಸಿಬ್ಬಂದಿ ಮರ ತೆರೆವುಗೊಳಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು.

Related posts

ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ : ಶ್ರೀ.ಧ.ಮಂ ವಸತಿ ಪ.ಪೂ. ಕಾಲೇಜಿನಲ್ಲಿ ‘ವ್ಯಕ್ತಿತ್ವ ವಿಕಸನ ಕಾರ್ಯಾಗಾರ’

Suddi Udaya

ಜೀವನದಲ್ಲಿ ಜಿಗುಪ್ಸೆ : ಕೊಕ್ಕಡದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿ: ತಪ್ಪಿದ ದೊಡ್ಡ ದುರಂತ

Suddi Udaya

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya
error: Content is protected !!