September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್

ಗುರುವಾಯನಕೆರೆ: ತನ್ನ ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನವನ್ನು ಗಳಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗುರುವಾಯನಕೆರೆಯ ವಿಶಾಲ ದಂಡೆಯ ಮೇಲೆ, ನಿಸರ್ಗ ರಮಣೀಯ ತಾಣದಲ್ಲಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿದವರು ನೀಟ್, ಜೆ ಇ ಇ ಟ್ರೈನರ್ ಹಾಗೂ ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದ ಸುಮಂತ್ ಕುಮಾರ್ ಜೈನ್ ಅವರು. ನೂರಾರು ವಿದ್ಯಾರ್ಥಿಗಳ ಹಾಗೂ ಹೆತ್ತವರ ಬೇಡಿಕೆಯ ಮೇರೆಗೆ ಇವರು ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್ ನ್ನು ಪ್ರಾರಂಭಿಸಿದ್ದಾರೆ.

ಲಾಂಗ್ ಟರ್ಮ್ ನೀಟ್ : ಡಾಕ್ಟರ್ ಆಗಬೇಕೆಂದು ಗುರಿ ಇಟ್ಟುಕೊಂಡ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆಯನ್ನು ಬರೆದು, ನಿರೀಕ್ಷಿತ ಅಂಕಗಳು ಬಾರದಿರುವಾಗ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿಯೆ ಸಂಪೂರ್ಣ ತಯಾರಾಗಿ , ಒಂದು ವರ್ಷಗಳ ಪರ್ಯಂತ ತರಬೇತಿ ಪಡೆಯುವುದನ್ನು ನೀಟ್ ಲಾಂಗ್ ಟರ್ಮ್ ತರಬೇತಿ ಎನ್ನುತ್ತಾರೆ.
ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆಯಲು ಎಷ್ಟೋ ಸಲ ಪ್ರತಿಭಾವಂತರಿಗೆ ಕೂಡಾ ಸಾಧ್ಯವಾಗುವುದಿಲ್ಲ. ಸರಿಯಾದ ಕೋಚಿಂಗ್ ದೊರಕದಿರುವುದು, ಯೋಗ್ಯ ಸ್ಟಡಿ ಮೆಟೀರಿಯಲ್ ಸಿಗದಿರುವುದು, ಸೂಕ್ತ ಮಾರ್ಗದರ್ಶನದ ಕೊರತೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ತಂತ್ರಗಳ ಅರಿವಿಲ್ಲದಿರುವಿಕೆ, ಪರಿಣಾಮಕಾರಿಯಾಗಿರದ ಪಾಠ ಪ್ರವಚನ ಮೊದಲಾದವು ಕಡಿಮೆ ಅಂಕ ಗಳಿಸಲು ಕಾರಣಗಳು. ಇವನ್ನೆಲ್ಲಾ ದೃಷ್ಟಿಯಲ್ಲಿರಿಸಿಕೊಂಡೇ ಎಕ್ಸೆಲ್ ಲಾಂಗ್ ಟರ್ಮ್ ಕೋಚಿಂಗ್ ಸೆಂಟರ್ ಕಾರ್ಯ ನಿರ್ವಹಿಸುತ್ತದೆ.
ರಿಪಿಟರ್ಸ್ ಮನೋವಿಜ್ಞಾನ ಅರ್ಥ ಮಾಡಿಕೊಂಡು, ಅವರು ಅಧಿಕ ಅಂಕ ಗಳಿಸಲು ಬೇಕಾಗುವ ಎಲ್ಲಾ ವಿಧಾನಗಳನ್ನು ಎಕ್ಸೆಲ್ ನಲ್ಲಿ ಹೇಳಿ ಕೊಡಲಾಗುತ್ತದೆ.

ಎಕ್ಸೆಲ್ ನ ವೈಶಿಷ್ಟ್ಯ: ವೈದ್ಯಕೀಯ ಶಿಕ್ಷಣ ಪಡೆಯಲು ರಾಷ್ಟ್ರ ಮಟ್ಟದಲ್ಲಿ ಈ ಬಾರಿ ಸುಮಾರು ಇಪ್ಪತ್ತೈದು ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂಥ ಕಠಿಣ ಸ್ಪರ್ಧೆಯ ನಡುವೆ ಸೀಮಿತ ಸಂಖ್ಯೆಯ ಸೀಟುಗಳಿರುವಾಗ, ಎಕ್ಸೆಲ್ ನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ನೀಟ್ ಬರೆದ 180 ವಿದ್ಯಾರ್ಥಿಗಳ ಪೈಕಿ 176 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 53 ಮಂದಿಗೆ 550ಕ್ಕಿಂತ ಹೆಚ್ಚು ಅಂಕಗಳು, 11 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕಗಳು ಬಂದಿರುವುದು ಗಮನಾರ್ಹ. 35 ನೆಯ ರಾಷ್ಟ್ರೀಯ ಕೆಟಗರಿ ರಾಂಕ್ ಪಡೆದುಕೊಂಡ ಸಂಜನಾ ಈರೈನವರ್ ಭೋಪಾಲ್ ನ ಏಮ್ಸ್ (AIIMS) ನಲ್ಲಿ ಸ್ಥಾನ ಪಡೆದರೆ,720ರ ಪೈಕಿ 692 ಅಂಕಗಳನ್ನು ಪಡೆದ ಆದಿತ್ ಜೈನ್ ಭುವನೇಶ್ವರದ ಏಮ್ಸ್ ನಲ್ಲಿ ಮೆಡಿಕಲ್ ಕೋರ್ಸ್ ಗೆ ಆಯ್ಕೆಯಾಗಿದ್ದಾರೆ. ಇಂಥ ಅಪೂರ್ವ ಸಾಧನೆಗೆ ಎಕ್ಸೆಲ್ ನಲ್ಲಿರುವ ಪಾಠ ಪ್ರವಚನಗಳು ವ್ಯವಸ್ಥೆಯೇ ಕಾರಣವೆನ್ನುವುದು ವಿದ್ಯಾರ್ಥಿಗಳ ಅಭಿಮತ.

ಹುಡುಗ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ : ಎಕ್ಸೆಲ್ ನಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಪ್ರತ್ಯೇಕ ಸ್ಟಡಿ ಅವರ್, ಯೋಗ ಧ್ಯಾನ ತರಬೇತಿ, ಸ್ಮರಣ ಶಕ್ತಿ ಹೆಚ್ಚಿಸುವ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. 24×7 ಆರೋಗ್ಯ ಸೇವೆ, ಬಿಸಿನೀರಿನ ವ್ಯವಸ್ಥೆ, ಲಾಂಡ್ರಿ , ಇ- ಲೈಬ್ರೆರಿ ಮೊದಲಾಗಿ ಹತ್ತಾರು ವಿದ್ಯಾರ್ಥಿ ಸ್ನೇಹಿ ಸೌಕರ್ಯಗಳು ಎಕ್ಸೆಲ್ ನಲ್ಲಿವೆ.

ಪ್ರಾಧ್ಯಾಪಕರು ಎಕ್ಸೆಲ್ ನ ಆಸ್ತಿ
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ , ಅನುಭವಿ, ಪ್ರತಿಭಾವಂತ, ಉನ್ನತ ಶೈಕ್ಷಣಿಕ ಅರ್ಹತೆಗಳಿರುವ ಇದೀಗ ಎಕ್ಸೆಲ್ ನಲ್ಲಿ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ… ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ.

ಭೌತವಿಜ್ಞಾನ ವಿಭಾಗ :

  • ಡಾ.ಸತ್ಯ ನಾರಾಯಣ ಭಟ್: 15 ವರ್ಷಗಳ ಬೋಧನಾನುಭವ

ರಸಾಯನ ವಿಜ್ಞಾನ

  • ಸುಮಂತ್ ಕುಮಾರ್ ಜೈನ್ : 16 ವರ್ಷಗಳ ಬೋಧನಾನುಭವ
  • ವೆಂಕಟೇಶ್ : 24 ವರ್ಷಗಳ ಬೋಧನಾನುಭವ
  • ಜೈಸ್ ಆಂಟನಿ : 15 ವರ್ಷಗಳ ಬೋಧನಾನುಭವ
  • ಕೇಶವ ರಾವ್ : 12 ವರ್ಷಗಳ ಬೋಧನಾನುಭವ
  • ಈಶ್ವರ್ ಶರ್ಮ : 10 ವರ್ಷಗಳ ಬೋಧನಾನುಭವ
  • ಹರೀಶ್ ಗೌಡ: 8 ವರ್ಷಗಳ ಬೋಧನಾನುಭವ
  • ವಿಚೇತ್ ಕುಮಾರ್ : 10 ವರ್ಷಗಳ ಬೋಧನಾನುಭವ

ಜೀವ ವಿಜ್ಞಾನ :

  • ಚಿಗುರು ಪ್ರಕಾಶ್ : 22 ವರ್ಷಗಳ ಬೋಧನಾನುಭವ
  • ಅಜಯ್ ವಿಲ್ಸನ್ : 20 ವರ್ಷಗಳ ಬೋಧನಾನುಭವ
  • ನಿಶಾ ಪೂಜಾರಿ : 8 ವರ್ಷಗಳ ಬೋಧನಾನುಭವ.
  • ದೀಪಾ : 15 ವರ್ಷಗಳ ಬೋಧನಾನುಭವ
  • ಸ್ಮಿತಾ : 10 ವರ್ಷಗಳ ಬೋಧನಾನುಭವ

ಪ್ರತಿಭಾವಂತರಿಗೆ ಎಕ್ಸೆಲ್ ನಲ್ಲಿ ರಿಯಾಯಿತಿ: ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ 95 ಶೇಕಡಾ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡ ವರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್, 85 ಶೇಕಡ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕೊಂಡವರಿಗೆ ಕಾಲೇಜು ಶುಲ್ಕದಲ್ಲಿ 50ಶೇಕಡಾ ರಿಯಾಯಿತಿ ಇರುತ್ತದೆ. ನೀಟ್ ಪರೀಕ್ಷೆ ಯಲ್ಲಿ 450 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. 400 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಫೀಸಿನಲ್ಲಿ 50 ಶೇಕಡಾ ರಿಯಾಯಿತಿ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9880899769, 9902284110 ಸಂಪರ್ಕಿಸಬಹುದು.

Related posts

ಆ. 3- 17: ಗುರುವಾಯನಕೆರೆ ಶಿವಂ ಟೆಕ್ಸ್‌ಟೈಲ್ಸ್‌ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್: ಅಮೋಘ 10% ರಿಂದ 40% ವರೆಗೆ ಗ್ರಾಹಕರಿಗೆ ರಿಯಾಯಿತಿ

Suddi Udaya

ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ವಿಧಿವಶ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

Suddi Udaya

ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ

Suddi Udaya

ರೆಖ್ಯ ಗ್ರಾಮದ ಸರ್ವೆ ನಂ:69/1 ರಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ನಡೆಸಿದ ಜಂಟಿ ಸರ್ವೆ ಪೂರ್ಣ: ಸೂಕ್ತ ಆದೇಶ ನೀಡುವಂತೆ ಶಾಸಕ ಹರೀಶ್ ಪೂಂಜರಿಂದ ಸಚಿವ ಈಶ್ವರ ಖಂಡ್ರೆರವರಿಗೆ ಮನವಿ

Suddi Udaya
error: Content is protected !!