25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ: ಮಾಜಿ ಶಾಸಕ ದಿ|ವಸಂತ ಬಂಗೇರರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ವತಿಯಿಂದ ದಿವಂಗತ ಮಾಜಿ ಶಾಸಕರಾದ ವಸಂತ ಬಂಗೇರರಿಗೆ ಮೇ.18 ರಂದು ಸಂಜೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಸಭೆ ಗೇರುಕಟ್ಟೆ ಆಟೋ ತಂಗುದಾಣದ ವಠಾರದಲ್ಲಿ ನಡೆಯಿತು.

ಕಳಿಯ ಗ್ರಾಮದ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್,ಕಳಿಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ,ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಭುವನೇಶ್ ಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಪೂಜಾರಿ ಗೇರುಕಟ್ಚೆ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ,ನಿರ್ದೇಶಕ ನೇವಿಲ್ ಸ್ಟೀವನ್‌ ಮೊರಾಸ್ ಪರಪ್ಪು, ಪರಪ್ಪು ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೆಲತ್ತಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಹಾಗೂ ಗೇರುಕಟ್ಟೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಹಾಗೂ ಸಾರ್ವಜನಿಕ ವ್ಯವಸ್ಥೆಗೆ ಹೆಚ್ಚಿನ ಅನುದಾನವನ್ನು ನೀಡಿದ ಏಕೈಕ ಶಾಸಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮನದಾಳದ ನುಡಿ ನಮನ ಸಲ್ಲಿಸಿದರು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಸದಸ್ಯರು, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ, ವಿವಿಧ ಸಂಘ,ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಮತ್ತು ವರ್ತಕರು, ಉಪಸ್ಥಿತರಿದ್ದರು. ಗೇರುಕಟ್ಟೆ ಆಟೋ ಚಾಲಕ-ಮಾಲೀಕರು ತಮ್ಮಆಟೋ ರಿಕ್ಷಾಗಳನ್ನು ರಸ್ತೆಯ ಪಕ್ಕದಲ್ಲಿರಿಸಿ ಶ್ರದ್ಧಾಂಜಲಿ ಸಭೆಯ ಯಶಸ್ವಿಗೆ ಸಹಕರಿಸಿದರು, ಸುಮಾರು 200 ಕ್ಕೂ ಹೆಚ್ಚಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಳಿಯ ಪಂಚಾಯತ್ ಸದಸ್ಯ ಹರೀಶ್ ಕುಮಾರ್ ಬಿ.ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಹೆಚ್. ಕಾರ್ಯಕ್ರಮ ನಿರ್ವಹಣೆ ಮಾಡಿದರು.

Related posts

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ವಂದನ್ ನೆಲ್ಯಾಡಿ ಮಾಲೀಕತ್ವದ ಎ.ಎಫ್.ಸಿ ಅಟಾಕರ್ಸ್ ಹೊಸಮಜಲು ನೆಲ್ಯಾಡಿ ತಂಡಕ್ಕೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಫೆ.7-10: ಶಿಶಿಲ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಸುರತ್ಕಲ್ ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಸಭಾಂಗಣದ ಲೋಕಾರ್ಪಣೆ

Suddi Udaya
error: Content is protected !!