ನ್ಯಾಯತರ್ಪು : ಇಲ್ಲಿನ ಕೊರೆಜಂಡ ಮನೆ ಆನಂದ ಗೌಡ ಎಂಬುವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾಗೂ ಮನೆಗೆ ಹಾನಿ ಉಂಟಾಗಿದೆ.

ಮೇ.18 ರ ಸಂಜೆ ಬಾರಿ ಸಿಡಿಲಿನ ಅಬ್ಬರದ ಹೊಡೆತಕ್ಕೆ ಮನೆಯ ಗೋಡೆ, ಸಿಮೆಂಟ್ ಕಂಬಗಳು ಬಿರುಕು ಬಿಟ್ಟಿದ್ದು, ಮನೆಯ ವಿದ್ಯುತ್ ವಯರಿಂಗ್ ಕಿತ್ತು ಹೋಗಿದೆ. ಮನೆ ಪಕ್ಕದಲ್ಲಿರುವ ದನಗಳ ಹಟ್ಟಿ ಮುಂಭಾಗದಲ್ಲಿ ಧರೆಗೆ ಸಿಡಿಲು ಬಡಿದು ಮಣ್ಣು ಜರಿದು ಬಿದ್ದಿದೆ.

ವಿಷಯ ತಿಳಿದು ಕಳಿಯ ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಕೆ.ಭೇಟಿ ನೀಡಿ ಸಂಬಂಧಿಸಿದ ಇಲಾಖೆಗೆ ಹಾಗೂ ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.