ಬೆಳ್ತಂಗಡಿ: ತನಗೆ ಹಾಗೂ ತನ್ನ ಮಗನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಸಾರ್ವಜನಿಕರ ಎದುರಿನಲ್ಲಿ ಅನುಚಿತವಾಗಿ ವರ್ತಿಸಿರುವುದಲ್ಲದೇ, ನನ್ನ ಮಗನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಬಳಂಜ ನಿವಾಸಿ ರತ್ನಾವತಿ ಅವರು ಬಳಂಜ ಪ್ರಕಾಶ್ ಶೆಟ್ಟಿ ಎಂಬವರ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆ ರತ್ನಾವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಮಗ, ಅಶ್ವಿನ್ ಹಾಗೂ ಬಳಂಜ ನಿವಾಸಿ ಪ್ರಕಾಶ್ ಶೆಟ್ಟಿ ಎಂಬಾತನಿಗೂ ಈ ಹಿಂದೆಯೇ ಮನಸ್ತಾಪವಿದ್ದು, ಮೇ 20 ರಂದು ರಾತ್ರಿ, ಬಳೆಂಜ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ, ವಿದ್ಯುತ್ ಸ್ಥಗಿತಗೊಂಡಿದ್ದು, ನನ್ನ ಮಗ ಹಾಗೂ ಮತ್ತೋರ್ವ ಜನರೇಟರ್ ಸ್ಟಾರ್ಟ್ ಮಾಡಲು ಹೋದಾಗ, ಕತ್ತಲಿನಲ್ಲಿ ನನ್ನ ಮಗ ಆಕಸ್ಮಿಕವಾಗಿ ಪ್ರಕಾಶ್ ಶೆಟ್ಟಿಯವರಿಗೆ ತಾಗಿರುತ್ತಾನೆ. ಆಗ ಆರೋಪಿತನು ನನ್ನ ಮಗನಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ನನಗೂ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಸಾರ್ವಜನಿಕರ ಎದುರಿನಲ್ಲಿ ಅನುಚಿತವಾಗಿ ವರ್ತಿಸಿರುವುದಲ್ಲದೇ, ಮಗನನ್ನುದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ರತ್ನಾವತಿ ಹಾಗೂ ಹಾಗೂ ಅವರ ಮಗ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿ ನೀಡಿದ ದೂರಿನ ಮೇರೆಗೆ, ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ : 504, 323, 354, 506 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.