September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ರಾಜ್ಯ ಟಾಪರ್ಸ್ ಗೆ ಲಕ್ಷ ಮೊತ್ತದೊಂದಿಗೆ, ಸನ್ಮಾನ

ಗುರುವಾಯನಕೆರೆ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ 597 ಅಂಕಗಳ ಮೂಲಕ ರಾಜ್ಯ ಕ್ಕೆ ಎರಡನೆಯ ಸ್ಥಾನ ಪಡೆದ ಧನ್ವಿ ಭಟ್ ಹಾಗೂ 595 ಅಂಕಗಳ ಮೂಲಕ ರಾಜ್ಯಕ್ಕೆ ನಾಲ್ಕನೆಯ ಸ್ಥಾನ ಪಡೆದ ಅನುಪ್ರಿಯ ಇವರನ್ನು ಆಕ್ಷರೋತ್ಸವ – ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಶಾಲು ಹೊದಿಸಿ, ಪೇಟಾ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಯ ಜೊತೆಗೆ, ತಲಾ ಒಂದು ಲಕ್ಷ ರೂಪಾಯಿ ನಗದು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಧನ್ವಿ ಭಟ್ ಅವರ ತಾಯಿ ಪ್ರೀತಿಕಾ, ಅನುಪ್ರಿಯಾ ಹೆತ್ತವರಾದ ಚಂದ್ರಶೇಖರ ಪಿಕೆ, ಪೂರ್ಣಿಮಾ ಈ ಸಂದರ್ಭದಲ್ಲಿ ಜೊತೆಗಿದ್ದರು. ಅತಿಥಿಗಳಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಸುಬ್ಬಣ್ಣ ರೈ, ಡಾ.ಶ್ರೀನಾಥ್ ಎಂ. ಪಿ, ಸಂಪತ್ ಸುವರ್ಣ ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್ ಬಿ.ಎಸ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಬಂಗ್ಲೆಗುಡ್ಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಎಸ್.ಐ.ಟಿ ಅಧಿಕಾರಿಗಳು

Suddi Udaya

ಚಾರ್ಮಾಡಿ ಕುಂಜಿರ ಗುರುಸ್ವಾಮಿ ರವರಿಗೆ ಅಯ್ಯಪ್ಪ ಭಕ್ತಬೃಂದ ಸಮಿತಿಯಿಂದ ತಾಂಬೂಲ ಕಾಣಿಕೆ

Suddi Udaya

ಹೆಪಾಟೈಟಿಷ್ ಬಿ” ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತೆಂಕಕಾರಂದೂರಿನ ಯುವಕ ಪತ್ನಿ, ತಾಯಿ, 2 ಚಿಕ್ಕ ಮಕ್ಕಳೊಂದಿಗಿರುವ ಮನೆಯ ಆಧಾರಸ್ತಂಭ ಗುರುರಾಜ್ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ

Suddi Udaya

ಮದ್ದಡ್ಕ ರಾಮನವಮಿ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya

ದೇವರ ನಾಡು ಕೇರಳದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ವೈ ಚಂದ್ರಮ ನೇತೃತ್ವದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು

Suddi Udaya

ಧರ್ಮಸ್ಥಳ: ‘ ದಾನ ಪುರುಷಾರ್ಥ ‘ ಭಿತ್ತಿಪತ್ರಿಕೆ ಅನಾವರಣ

Suddi Udaya
error: Content is protected !!