30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಏಕಾಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಬೆಳ್ತಂಗಡಿ : ಏಕಾ ಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಉಚ್ಚವ್ ಪುರೈ ನಿ, ಉಜ್ವ ಕಾಲಿಪ್ಪರಾ ಭರಾಯಿಚ್ ನಿವಾಸಿ ಅನಿಲ್ ಚೌಹಾಣ್ ಎಂಬವರು ಮೇ 22 ರಂದು ಅವರ ಸಂಸ್ಥೆಯ ಬಾಬ್ತು ವಾಹನದಲ್ಲಿ ಗುರುವಾಯನಕೆರೆಯಿಂದ ಉಜಿರೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಮಧ್ಯಾಹ್ನ ಬೆಳ್ತಂಗಡಿ ಕಸಬಾ ಗ್ರಾಮದ ಲೋಬೋ ಮೋಟರ್ಸ್ ಅಂಗಡಿಯ ಮುಂಭಾಗ ಬರುತ್ತಿದ್ದಂತೆ ಎಡಬದಿಯಲ್ಲಿ ನಿಂತಿದ್ದ ಅನ್ಸಿ ಅಗೇರಿಯಾ ಎಂಬಾತನು ಒಮ್ಮೆಲೆ ಏಕಾ ಎಕಿ ಪಿರ್ಯಾದಿದಾರರ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಗೆ ಬಿದ್ದಾಗ ಅಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಆತನನ್ನು ಎತ್ತಿ ಉಪಚರಿಸಿ ನೋಡಲಾಗಿ ಸದ್ರಿ ವ್ಯಕ್ತಿಯ ಸೊಂಟದಿಂದ ಕೆಳಗೆ ಸಂಪೂರ್ಣ ಜಖಂಗೊಂಡು ಅಸ್ವಸ್ಥನಾಗಿದ್ದವನನ್ನು ಅಲ್ಲಿ ಸೇರಿದವರು ಆಟೋ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿರುತ್ತಾ ಫಲಕಾರಿಯಾದೆ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ .

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯು ಡಿ ಆರ್ ನಂ 22/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಭೂ ಸೇನೆಯಿಂದ ನಿವೃತ್ತಿಗೊಂಡ ಪದ್ಮುಂಜ ಗಣೇಶ್ ಶೆಟ್ಟಿ ರವರಿಗೆ ಪದ್ಮುಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ವತಿಯಿಂದ ಸನ್ಮಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಡುಗೆ ಭಟ್ಟರಾಗಿದ್ದ ಪದ್ಮನಾಭ ಶಬರಾಯ ನಿಧನ

Suddi Udaya

ಶಿರ್ಲಾಲು ಬಳಂಜ ಕಾಡು ಕೋಣಗಳ ಸಂಚಾರ

Suddi Udaya

ಗುರುವಾಯನ ಕೆರೆ: ಶಕ್ತಿ ನಗರದ ನಿವಾಸಿ ಸುರೇಶ್ ಪೈ ಎಂ. ನಿಧನ

Suddi Udaya

ಬೆಳ್ತಂಗಡಿಯಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ: ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪ್ರತ್ಯೇಕ ಎರಡು ಅಪಘಾತ: ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!