ಬಳಂಜ:ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಹಳೆ ವಿದ್ಯಾರ್ಥಿ ಸಂಘ ಬಳಂಜ, ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಹಾಗೂ ಜ್ಯೋತಿ ಯುವತಿ ಮಂಡಲದ ವತಿಯಿಂದ ನಡೆದ ವ್ಯಕ್ತಿತ್ವ ವಿಕಸನ ತರಭೇತಿ ಕಾರ್ಯಗಾರವು ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದಲ್ಲಿ ಮೇ 26 ರಂದು ನಡೆಯಿತು.
ತರಭೇತಿ ಕಾರ್ಯಾಗಾರವನ್ನು ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ತರಭೇತಿ ಕಾರ್ಯಗಾರಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ, ಮನೋಧೈರ್ಯ ತುಂಬುತ್ತದೆ.ನಾವು ಜೀವನದಲ್ಲಿ ಯಶಸ್ಸು ಗಳಿಸಲು ನಮ್ಮ ವ್ಯಕ್ತಿತ್ವ ತುಂಬಾ ಮುಖ್ಯವಾಗಿರುತ್ತದೆ ಎಂದರು.
ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಮಾತನಾಡಿ ಬಳಂಜ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಹಂಬಲದಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಬಳಂಜದಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳು ನಡಿತಾ ಇದೆ ಎಂದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ಬಳಂಜದಲ್ಲಿ ಇರುವಷ್ಟು ಸಾಧಕರು ತಾಲೂಕಿನ ಬೇರೆಲ್ಲೂ ಕಾಣಲೂ ಸಾದ್ಯವಿಲ್ಲ. ಸಂಘ ಸಂಸ್ಥೆಗಳು ಗಟ್ಟಿಯಾಗಿರಲು ತರಭೇತಿ ಕಾರ್ಯಗಾರಗಳು ಮುಖ್ಯವಾಗುತ್ತದೆ ಎಂದರು. ವಲಯ ಉಪಾಧ್ಯಕ್ಷ, ತರಭೇತುದಾರ ಶಂಕರ್ ರಾವ್ ಅದ್ಬುತವಾಗಿ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ತರಭೇತಿ ನಡೆಸಿಕೊಟ್ಟರು.
ಪಿಯುಸಿ ಸಾಧಕರಿಗೆ ಸನ್ಮಾನ: ಪಿಯುಸಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 4 ನೇ ಸ್ಥಾನ ಪಡೆದ ಅನುಪ್ರಿಯಾ (99%) ಮೈತ್ರಿ ಮನೆ ಬಳಂಜ, ಪಿಯುಸಿ ಸಾಧಕರಾದ ಕೃತಿಕಾ ಜೈನ್ (92%) ಡೇವುಣಿ ಬಳಂಜ,ಪ್ರಾಣೇಶ್ ಶೆಟ್ಟಿ (93.16%)ಕುರೆಲ್ಯ ನಾಲ್ಕೂರು,ಆಗಮ್ ಹೆಗ್ಡೆ (90.83%) ಕೋಡಿ ಬಳಂಜ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಚೇತನಾ,ಜೆಸಿಐ ಬೆಳ್ತಂಗಡಿ ಮಂಜುಶ್ರೀ ಕಾರ್ಯದರ್ಶಿ ಅನುದೀಪ್ ಜೈನ್,ಮಹಿಳಾ ಜೇಸಿ ಸಂಯೋಜಕಿ ಶೃತಿ ರಂಜಿತ್, ಜೂನಿಯರ್ ಜೆಸಿ ಅಧ್ಯಕ್ಷ ಸಮರ್ಥನ್ ಉಪಸ್ಥಿತರಿದ್ದರು.ಜೆಸಿ ಉಪಾಧ್ಯಕ್ಷ ಚಂದ್ರಹಾಸ ಬಳಂಜ ವೇದಿಕೆಗೆ ಆಹ್ವಾನಿಸಿದರು.ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಪೂಜಾರಿ ವಂದಿಸಿದರು. ವಿಶಾಲ ಜಗದೀಶ್,ಅಶೋಕ್ ಶೆಟ್ಟಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಪೂರ್ವಾಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ಹಿರಿಯರಾದ ಚಂದನಾ ಪಡಿವಾಳ್ ಹಾಗೂ ಶಿಕ್ಷಣ ಟ್ರಸ್ಟ್ ಬಳಂಜ, ಅಮೃತ ಮಹೋತ್ಸವ ಸಮಿತಿ ಬಳಂಜ, ಹಳೆ ವಿದ್ಯಾರ್ಥಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.