27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ

ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ವಕೀಲರ ಭವನದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಪ್ರಧಾನ ಹಿರಿಯ ನ್ಯಾಯಾಧೀಶ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಮರಕಡ ವಹಿಸಿದರು.

ಮುಖ್ಯ ಅಥಿತಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ ಸಂದೇಶ್ ಕೆ ಜೆ , ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಉಪಸ್ಥಿತರಿದ್ದರು.

ಶಶಿಧರ ಎಂ ಗೌಡ ರವರು ಸವದತ್ತಿ ನ್ಯಾಯಾಲಯದಿಂದ ವರ್ಗಾವಣೆಗೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದರು. ಇವರು ಕೃಷಿ ಕುಟುಂಬದಿಂದ ಬಂದವರಾಗಿದ್ದು, ಎಂ ಎ ( ಇಂಗ್ಲಿಷ್ ), ಬಿಎ, ಎಲ್ ಎಲ್ ಬಿ ಪದವಿಯನ್ನು ದಾವಣಗೆರೆಯಲ್ಲಿ ಪೂರೈಸಿರುತ್ತಾರೆ. ಪತ್ನಿ ಶ್ರೀಮತಿ ಸುನಿತಾ ಆರ್ ಬೈಲಹೊಂಗಲ ನ್ಯಾಯಾಲಯದಲ್ಲಿ ಎಪಿಪಿ ಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಎ ಜಿ ಪಿ, ಮನೋಹರ್ ಕುಮಾರ್ ಎಂ ಮತ್ತು ಎ ಪಿ ಪಿ ಯವರಾದ ದಿವ್ಯಾರಾಜ್ ಹೆಗ್ಡೆ ಮತ್ತು ಶ್ರೀಮತಿ ಆಶೀತಾ ರವರು ಮತ್ತು ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.

ನವೀನ್ ಬಿ ಕೆ ಸ್ವಾಗತಿಸಿ, ಸಂದೀಪ್ ಡಿಸೋಜ ಧನ್ಯವಾದವಿತ್ತರು.

Related posts

ಶ್ರೀ ಕ್ಷೇತ್ರ ಕೊಲಕಾಡಿಯಿಂದ ಧರ್ಮಸ್ಥಳ ಭೇಟಿ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ಬೆಳಾಲು: ಮಾಯಾ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ

Suddi Udaya

ಜಿಲ್ಲಾ ಮಟ್ಟದ ಕ್ರೀಡೋತ್ಸವ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Suddi Udaya

ಲೋಕಸಭಾ ಚುನಾವಣೆ : ನಾಳೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Suddi Udaya

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ, ಕ್ಯಾನ್ಸರ್ ಜನಜಾಗೃತಿ ಅಭಿಯಾನ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya
error: Content is protected !!