24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಜ್ಯೋತಿ ಯುವತಿ ಮಂಡಲದ ಉದ್ಘಾಟನಾ ಸಮಾರಂಭ

ಬಳಂಜ: ರಾಜ್ಯ ಮಟ್ಟದಲ್ಲಿ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಜ್ಯೋತಿ ಯುವತಿ ಮಂಡಲದ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಉಮಾಮಹೇಶ್ವರ ಯುವಕ ಮಂಡಲದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆ, ತಾ.ಪಂ ಮಾಜಿ ಉಪಾಧ್ಯಕ್ಷೆ ಚಂದನಾ ಪಡಿವಾಳ್ ಬಳಂಜ ಗುತ್ತು ಉದ್ಘಾಟಿಸಿ ನೂರಾರು ನೆನಪುಗಳಿರುವ ಜ್ಯೋತಿ ಯುವತಿ ಮಂಡಲ ಎರಡು,ಮೂರು ದಶಕಗಳ ಹಿಂದೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ ಸಂಸ್ಥೆ. ಕಲೆ, ಸಾಹಿತ್ಯ,ಸಾಂಸ್ಕೃತಿಕ, ಕ್ರೀಡೆ ಹೀಗೆ ಹಲವು ವಿಭಾಗದಲ್ಲಿ ಹೆಸರು ಗಳಿಸಿದೆ. ಇದೀಗ ಮತ್ತೆ ನೂತನ ತಂಡದೊಂದಿಗೆ ಮೇ 26 ರಂದು ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ ಎಂದರು.

ವೇದಿಕೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ್ ಪಿ.ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಶ್ರೀ ಉಮಾಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಸುಕೇಶ್ ಪೂಜಾರಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ‌ ಉಪಸ್ಥಿತರಿದ್ದರು.

ಜ್ಯೋತಿ ಯುವತಿ ಮಂಡಲದ ಅಧ್ಯಕ್ಷೆ ಚೇತನಾ ಅವರು ಸ್ವಾಗತಿಸಿದರು, ಚಂದ್ರಹಾಸ್ ಬಳಂಜ ಕಾರ್ಯಕ್ರಮ‌ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಹೂ ಗುಚ್ಚ ತಯಾರಿಕೆಯ ಸ್ಪರ್ಧೆ ನಡೆಸಲಾಯಿತು. ಪುಷ್ಪಾ ಗಿರೀಶ್ ಪ್ರಾರ್ಥಿಸಿದರು.

Related posts

ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ವಾರ್ಷಿಕ ಮಹಾರಥೋತ್ಸವ

Suddi Udaya

ನಿಡ್ಲೆ ಹಾಗೂ ಬೂಡುಜಾಲುವಿನಲ್ಲಿ ಸೌಜನ್ಯಪರ ಹಾಕಿದ ಬ್ಯಾನರ್ ನ್ನು ಕಿತ್ತೆಸೆದ ಕಿಡಿಗೇಡಿಗಳು

Suddi Udaya

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

Suddi Udaya

ಕನ್ಯಾಡಿ: ನೇರೊಳ್ದಪಲ್ಕೆ ಅಂಗನವಾಡಿಗೆ ಗ್ಯಾಸ್ ಸ್ಟೌವ್ ಕೊಡುಗೆ

Suddi Udaya

ನ.13: ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ

Suddi Udaya

ಗುರುವಾಯನಕೆರೆಯಲ್ಲಿ ನಿಲ್ಲಿಸಿದ ರೂ.68 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಕಳವು

Suddi Udaya
error: Content is protected !!