ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯಕ್ಷಗಾನ ಸಂಘಗಳಿಂದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ಗೌರವಾರ್ಪಣೆ

ಬೆಳ್ತಂಗಡಿ : ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ ಇವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಶ್ರೀನಿಲಯದಲ್ಲಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಮತ್ತು
ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು. ಶ್ರೀಮತಿ ಸ್ವರ್ಣಲತಾ ಭಾಸ್ಕರ್ ಉಪಸ್ಥಿತರಿದ್ದರು.

88 ವರ್ಷದ ಹಿರಿಯ ವಿದ್ವಾಂಸರಾದ ಶಾಸ್ತ್ರಿಯವರು ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ಪುರಾಣ ಕಥಾ ಚಿಂತಾ ರತ್ನ, ದಶಾವತಾರ ಉಪನ್ಯಾಸಗಳು, ಅರ್ಥ ಸಹಿತ ಕುಮಾರ ವಿಜಯ ಮುಂತಾದ ಅಪೂರ್ವ ಕೃತಿಗಳನ್ನು ರಚಿಸಿದ್ದು ಯಕ್ಷಗಾನ ಆಸಕ್ತರಿಗೆ ಉಪಯುಕ್ತವಾದ ಕೃತಿಗಳಾಗಿವೆ.

ಶೇಣಿ ,ಸಾಮಗ, ಪೆರ್ಲ, ಕಾಂತ ರೈ , ಜೋಷಿ ಮೊದಲಾದ ಮಹಾನ್ ಕಲಾವಿದರೊಂದಿಗೆ ಅರ್ಥಧಾರಿಯಾಗಿ ಜನಪ್ರಿಯ ರಾಗಿದ್ದ ಇವರು ಕಳೆದ ಮೂರು ವರ್ಷಗಳಿಂದ ತಾಳಮದ್ದಳೆಯಲ್ಲಿ ಭಾಗವಹಿಸದೆ ಇದ್ದರೂ ವಿಶ್ರಾಂತ ಜೀವನದಲ್ಲಿ ತನ್ನ ಜ್ಞಾನ,ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದಾರೆ.

Related posts

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕ್ಕಾಗಿ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ: ಪ್ರತಾಪಸಿಂಹ ನಾಯಕ್

Suddi Udaya

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಅ.11: ಮೆಟ್ರಿಕ್ ಪೂರ್ವ ಬಾಲಕ- ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ

Suddi Udaya

INICET ಪರೀಕ್ಷೆ : ಕೊಯ್ಯೂರಿನ ಡಾ. ರಿತೇಶ್ ಕುಮಾರ್ ರಿಗೆ 679ನೇ ರ್‍ಯಾಂಕ್

Suddi Udaya

ಮೇ 20,21: ಸಿಇಟಿ ಪರೀಕ್ಷೆ

Suddi Udaya
error: Content is protected !!