25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಮೊಗ್ರು: ಮುಗೇರಡ್ಕ ಕಿ.ಪ್ರಾ. ಶಾಲೆಯ ಬಿಸಿಯೂಟ ಕೊಠಡಿಗೆ ಬಂದಾರು ಗ್ರಾ.ಪಂ. ವತಿಯಿಂದ ಶೀಟ್ ಅಳವಡಿಕೆ

ಮೊಗ್ರು : ಮೊಗ್ರು ಗ್ರಾಮದ ಮುಗೇರಡ್ಕ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೊಠಡಿಯೊಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರುತಿರುವುದನ್ನು ಕಂಡು ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಗೌಡ, ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಪಂಚಾಯತ್ ಗಮನಕ್ಕೆ ತಂದರು.

ತಕ್ಷಣ ಕಾರ್ಯಪ್ರವೃತರಾದ ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ್ ಪೂಜಾರಿ ಮತ್ತು ಬಾಲಕೃಷ್ಣ ಗೌಡ ಮುಗೇರಡ್ಕ ಇವರು ಪಂಚಾಯತ್ ಅನುದಾನದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರ ಸಹಕಾರದಲ್ಲಿ ಶಾಲೆ ಪ್ರಾರಂಭಕ್ಕೂ ಮೊದಲೇ ಬಿಸಿಯೂಟ ಕಟ್ಟಡಕ್ಕೆ ಶೀಟ್ ವ್ಯವಸ್ಥೆ ಮಾಡಲಾಯಿತು.

ಶಾಲಾಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಬಂದಾರು ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರಿಂದ ಮತದಾನ

Suddi Udaya

ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ: ಲೀಟರ್ ಗೆ 2 ರೂ ಹೆಚ್ಚಳ

Suddi Udaya

ಸವಣಾಲು ಅ. ಹಿ. ಪ್ರಾ. ಶಾಲೆಯ ನಡ್ತಿಕಲ್ಲುವಿನಲ್ಲಿ ಹಣ್ಣಿನ ಗಿಡನಾಟಿ

Suddi Udaya

ತೆಕ್ಕಾರು: ಹದಗೆಟ್ಟ ಗೋದಾಮುಗುಡ್ಡೆ – ಗೋವಿಂದರಗುಳಿ- ಸರಳಿಕಟ್ಟೆ ರಸ್ತೆ: ದುರಸ್ತಿಗೊಳಿಸುವಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ

Suddi Udaya

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಬೆಹರಿನ್ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ ಪ್ರದಾನ

Suddi Udaya
error: Content is protected !!