22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

ಕೊಕ್ಕಡ: ಕಳೆಂಜ ಗ್ರಾಮದ ಕಾಂತ್ರೇಲು ನಿವಾಸಿ ಅರುಣ ತನ್ನ ಇಳಿ ವಯಸ್ಸಿನ ತಾಯಿ ಸುಂದರಿಯನ್ನು ಸಾಕುವ ಸಲುವಾಗಿ ಮದುವೆಯಾಗದೆ ಉಳಿದು ಕೂಲಿ ಕೆಲಸ ಮಾಡಿ ಬದುಕುತ್ತಿದ್ದು ಇತ್ತೀಚೆಗೆ ಅರುಣ ಎಂಬವರು ಕಾಯಿಲೆಗೆ ತುತ್ತಾಗಿದ್ದು ಅವರ ಚಿಕಿತ್ಸೆಗೆ 45,000/-ರೂ ಹಾಗೂ ಕಳೆಂಜ ಗ್ರಾಮದ ಶಿಬರಾಜೆ ಪಾದೆ ನಿವಾಸಿ 80 ವರ್ಷ ಪ್ರಾಯದ ಸೀತಮ್ಮ ಅನಾರೋಗ್ಯ ಪೀಡಿತರಾಗಿರುತ್ತಾರೆ. ಅವರ ಮಗಳು ಜಯಂತಿ(60 ವರ್ಷ) ಜಾರಿ ಬಿದ್ದು ಕಾಲಿನ ಶಸ್ತ್ರಕ್ರಿಯೆಗೆ ಒಳಪಟ್ಟು ಮನೆಯಲ್ಲಿರುತ್ತಾರೆ. ಜಯಂತಿ ಯವರ ಮಗ ಅಶ್ವತ್ ಮರದಿಂದ ಬಿದ್ದು ಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿ ಮನೆಯಲ್ಲಿರುತ್ತಾರೆ, ಇವರ ಚಿಕಿತ್ಸೆಗೆ 30.000/-ರೂ ಮೊತ್ತದ ಹಣವನ್ನು ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರು ಸಂಘದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ ಸಂಗ್ರಹಿಸಿ ಹಸ್ತಾಂತರಿಸಿದರು.

Related posts

ಬಡಗಕಾರಂದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಶವ ಪತ್ತೆ: ವಾರೀಸುದಾರರು ಪತ್ತೆಗಾಗಿ ಮನವಿ

Suddi Udaya

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

Suddi Udaya

ಉರುವಾಲು:32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ರಾಜ್ಯಮಟ್ಟದ ಡಿಸ್ಕಸ್ ಥ್ರೋ: ಬಳಂಜದ ಸುಷ್ಮಾ ಬಿ ಪೂಜಾರಿ ಪ್ರಥಮ

Suddi Udaya

ಧರ್ಮಸ್ಥಳ: ಗಂಗಾಧರ ಬೇಕಲ್ ನಿಧನ

Suddi Udaya
error: Content is protected !!