April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸರ್ಕಾರಿ ಇಲಾಖಾ ಸುದ್ದಿ

ಮೇ.31ಕ್ಕೆ ನಿವೃತ್ತರಾಗುತ್ತಿರುವ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಮೆನೇಜರ್ ಲ| ರವೀಂದ್ರ ಶೆಟ್ಟಿ ಬಳಂಜ

ಬೆಳ್ತಂಗಡಿ: ಭಾಷೆ ಸಂವಾದ ಮಾಧ್ಯಮ. ಅದು ನಮ್ಮನ್ನು ಬೆರೆತು ಕಲೆತು ನಲಿಯುವಂತೆ ಮಾಡುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಸುಳ್ಳಾಗದು. ರವೀಂದ್ರ ಶೆಟ್ಟಿಯವರಿಗೆ ಈ ಗಾದೆ ಮಾತು ಬಹಳ ಚೆನ್ನಾಗಿ ಒಪ್ಪುತ್ತದೆ. ಬಹುಭಾಷಾ ಪಂಡಿತ ಎಂದೇ ಹೇಳಬಹುದು. ಯಾವ ಭಾಷೆ ಮಾತನಾಡುವ ವ್ಯಕ್ತಿ ಎದುರಾದರೂ ಅವರ ಭಾಷೆಯಲ್ಲೇ ಸಂಭಾಷಣೆ ಆರಂಭಿಸಿ ಅವರನ್ನು ಸಂತೋಷಪಡಿಸುವ ಜಾಣ್ಮೆ ಇವರಲ್ಲಿದೆ.


1983 ರಿಂದ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು 41 ವರ್ಷಗಳ ಸುದೀರ್ಘ ಸೇವೆಯಲ್ಲಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಇದೀಗ ಬೆಳ್ತಂಗಡಿ ಶಾಖೆಯಲ್ಲಿ ಮೇನೇಜರ್ ಹುದ್ದೆಯಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ.


ರವೀಂದ್ರ ಶೆಟ್ಟಿರವರು ಸಾರ್ವಜನಿಕವಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡವರು. ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಇದರ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬೆಳ್ತಂಗಡಿ ಮಂಜುಶ್ರೀ ಜೇಸಿಯ ಅಧ್ಯಕ್ಷರಾಗಿ ಮತ್ತು ವಲಯಾಧಿಕಾರಿಯಾಗಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಸಂಪುಟದ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕಿನ ಮಾಜಿ ಅಧ್ಯಕ್ಷರಾಗಿ, ಉಜಿರೆ ಶ್ರೀ ಶಾರದೋತ್ಸವ ಸಮಿತಿ ಹಾಗು ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರಾಗಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲರಿಗೂ ಚಿರಪರಿಚಿರಾಗಿದ್ದಾರೆ.


ಪತ್ನಿ ಶ್ರೀಮತಿ ಭಾರತಿ ಆರ್ ಶೆಟ್ಟಿಯವರು, ಪುತ್ರ ಸುಮಂತ್ ಹಾಗೂ ಪುತ್ರಿ ಸುಶ್ಮಿತ ಜೊತೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya

ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya

ವೇಣೂರು ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಆಯ್ಕೆ

Suddi Udaya

ಜು.12: ವೇಣೂರು ತುರ್ತು ಕಾಮಗಾರಿಯ ಪ್ರಯುಕ್ತ ವಿದ್ಯುತ್ ನಿಲುಗಡೆ

Suddi Udaya
error: Content is protected !!