April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಾಪಿನಡ್ಕ: ರಸ್ತೆ ಅಪಘಾತದಲ್ಲಿ ದೊಡ್ಡ ದುರಂತವನ್ನು ತಪ್ಪಿಸಿದ ಟಿಪ್ಪರ್ ಚಾಲಕ,

ಕಾಪಿನಡ್ಕ:ಕಾಪಿನಡ್ಕ ಸೇತುವೆ ಬಳಿ ಟಿಪ್ಪರ್ ಮತ್ತು ಕಾರ್ ನಡುವೆ ರಸ್ತೆ ಅಪಘಾತ ಸಂಭವಿಸುವ ದೊಡ್ಡ ದುರಂತವನ್ನು ಟಿಪ್ಪರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ.

ಸೇತುವೆಯ ಕೆಳಗಿನ‌ ಇಕ್ಕಟ್ಟಾದ ರಸ್ತೆಯಿಂದ ಕಾರೊಂದು ಮುಖ್ಯ ರಸ್ತೆಗೆ ಬರುತ್ತಿದ್ದಾಗ ಅಳದಂಗಡಿ ಕಡೆಯಿಂದ ಅಶೋಕ್ ಲೈಲ್ಯಾಂಡ್ 10 ವೀಲ್ ಟಿಪ್ಪರ್ ಲೋಡ್ ಗಾಡಿ ಬೆಳ್ತಂಗಡಿ ಕಡೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಕಾರ್ ಡಿಕ್ಕಿಯಾಗುವುದನ್ನು ತಪ್ಪಿಸುವಾಗ ಟಿಪ್ಪರ್ ರಸ್ತೆಯ ಸೈಡ್ ಗೆ ಎಳೆಯಲ್ಪಟ್ಟು ನಿಂತಿದೆ. ಒಂದು ವೇಳೆ ಟಿಪ್ಪರ್ ನಿಲ್ಲದಿದ್ದರೆ ಕೆಳಗೆ ದೊಡ್ಡ ಗುಂಡಿ ಹಾಗೂ ಲೈಟ್ ಕಂಬಗಳಿದ್ದವು‌.ಈ ವೇಳೆ ಗುಂಡಿಗೆ ಬೀಳುತ್ತಿದ್ದರೆ ದೊಡ್ಡ ದುರುಂತ ಸಂಭವಿಸುತ್ತಿತ್ತು. ದೇವರ ದಯದಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.. ಟಿಪ್ಪರನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Related posts

ಮಚ್ಚಿನ ಪ್ರೌಢಶಾಲೆಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ವಿವಿಧ ಕ್ರೀಡಾಕೂಟಗಳು

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೆಯರ್ ವಿತರಣೆ

Suddi Udaya

ನಾರಾವಿ: ಎನ್ ಎಸ್ ಎಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ

Suddi Udaya

ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಗೆ ಆಯ್ಕೆ

Suddi Udaya

ಜೂ.21: ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya
error: Content is protected !!