
ಬಳಂಜ: ದ.ಕ ಜಿ.ಪಂ. ಕಿ.ಪ್ರಾ ಶಾಲೆ ಅಟ್ಲಾಜೆ ಇಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಮೇ 31ರಂದು ನೆರವೇರಿತು.
ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಆರತಿ ಬೆಳಗಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಜಗದೀಶ್ ಕೆ, ಉಪಾಧ್ಯಕ್ಷೆ ಶ್ರೀಮತಿ ರೂಪಲತಾ, ಸರ್ವೋದಯ ಫ್ರೆಂಡ್ಸ್ ಅಟ್ಲಾಜೆಯ ಅಧ್ಯಕ್ಷ ಸುರೇಶ್ ಹೇವ, ಯುವ ಉದ್ಯಮಿ ನವೀನ್ ಲಾಂತ್ಯಾರ್, ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕ ಪ್ರಮೋದ್ ಎಸ್, ಸಹಶಿಕ್ಷಕಿ ಶ್ರೀಮತಿ ಶ್ವೇತಾ ಆರ್.ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಗೂ ಶಾಲಾ ಕೊಡುಗೈ ದಾನಿಯಾದ ಪ್ರವೀಣ್ ಲಾಂತ್ಯಾರು ಶಾಲಾ ಮಕ್ಕಳಿಗಾಗಿ ನೀಡಿದ ಬರವಣಿಗೆಯ ಪುಸ್ತಕಗಳು, ಪೆನ್ಸಿಲ್ ಇತ್ಯಾದಿ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ನಂತರ ಸಿಹಿ ತಿಂಡಿಯನ್ನು ನೀಡಲಾಯಿತು.