September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳಗಾವಿ ಅಧಿವೇಶನ: ಅಧಿಕ ಮಳೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ: ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ: ಅಡಿಕೆ ಬೆಳೆ ಸೇರಿದಂತೆ ತೋಟಗಾರಿಕ ಬೆಳೆಗಳ ಸಮಗ್ರ ಹಾಗೂ ಪೋಷಕಾಂಶಗಳ ನಿರ್ವಹಣೆಗಾಗಿ ಘಟಕ ವೆಚ್ಚದಡಿ ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗೆ ರೈತರಿಗೆ ಪ್ರತಿ ಹೆಕ್ಟೇರ್ಗೆ ರೂ.1500 ಗಳಂತೆ 2 ಹೆಕ್ಟೇರ್ ವರೆಗೆ ರೂ.3000 ಗಳ ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ರೂ.15.00 ಲಕ್ಷಗಳು ನಿಗಧಿಯಾಗಿದ್ದು, ಈವರೆಗೂ ರೂ. 9.23813 ಲಕ್ಷ ಸಹಾಯಧನವನ್ನು 485 ಫಲಾನುಭವಿಗಳ ಪಾವತಿಸಲಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ರಾಜ್ಯ ಅಧಿವೇಶನದಲ್ಲಿ ವಿಧಾನಪರಿಷತ್ ಕಾರ್ಯಕಲಾಪದಲ್ಲಿ ವಿಧಾನಪರಿಷತ್ ಸದಸ್ಯ ಉಜಿರೆ ಪ್ರತಾಪಸಿಂಹ ನಾಯಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅಕಾಲಿಕ ಮತ್ತು ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದ ಕಾರಣದಿಂದ ಸಾಕಷ್ಟು ಅಡಿಕೆ ಮರಗಳು ನಾಶವಾಗಿದ್ದು, ಅಡಿಕೆ ಬೆಳೆಗಾರರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬುದಾಗಿ ಪ್ರಶ್ನಿಸಿದ್ದರು.2025-26ನೇ ಸಾಲಿನಲ್ಲಿ ಅತಿವೃಷ್ಠಿಯಿಂದಾಗಿ ಮಂಗಳೂರು ತಾಲೂಕಿನಲ್ಲಿ 5,88,245, ಬಂಟ್ವಾಳದಲ್ಲಿ 8,67,790, ಬೆಳ್ತಂಗಡಿಯಲ್ಲಿ 20,06,550, ಪುತ್ತೂರಿನಲ್ಲಿ 1,55,715, ಸುಳ್ಯದಲ್ಲಿ 5,02,018, ಮೂಡಬಿದರೆಯಲ್ಲಿ 18,55,100, ಮೂಲ್ಕಿಯಲ್ಲಿ 3,77,300, ಕಡಬದಲ್ಲಿ 10,290, ಉಳ್ಳಾಲ ತಾಲೂಕಿನಲ್ಲಿ 50,298 ಹೀಗೆ ಜಿಲ್ಲೆಯಲ್ಲಿ ಒಟ್ಟು 65,13,306 ಅಡಿಕೆ ಮರಗಳೂ ಹಾನಿಗೊಳಗಾಗಿವೆ ಎಂದರು.

Related posts

ಬೆಳ್ತಂಗಡಿ: ಹಳೆಕೋಟೆ ಸಮೀಪ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

Suddi Udaya

ಚಾರ್ಮಾಡಿ ಬೀಟಿಗೆಯಲ್ಲಿ ರಸ್ತೆ ದಾಟುತ್ತಿದ್ದ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಬಾಲಕ ಮೃತ್ಯು

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.12 ಡಿವಿಡೆಂಡ್ ಘೋಷಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Suddi Udaya

ಮರೋಡಿ: ಅರುಣೋದಯ ಯುವಕ ಮಂಡಲದಿಂದ ‘ಆಟಿದ ತಿನಸ್ ಬಂಜರ ವನಸ್’ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya
error: Content is protected !!