ಉಜಿರೆ : ಇಲ್ಲಿನ ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲೆ ಉಜಿರೆ, ರಾಜ್ಯ ಪಠ್ಯಕ್ರಮ, ಇಲ್ಲಿ ಶಾಲಾ ಪ್ರಾರಂಭೋತ್ಸವು ಹೂ ಹಾಗೂ ತಳಿರು ತೋರಣಗಳಿಂದ ಶೃಂಗರಿಸಿ ಶಾಲಾ ಆವರಣದಲ್ಲಿರುವ ಫಲಕಗಳನ್ನು ಮಕ್ಕಳಿಗಾಗಿ ವಿಶೇಷವಾಗಿ ಪ್ರದರ್ಶಿಸಲಾಯಿತು. ಹೊಸದಾಗಿ ಸೇರ್ಪಡೆಯಾದ ಮಕ್ಕಳನ್ನು ವಿಶೇಷವಾಗಿ ಬ್ಯಾಂಡ್ ಸೆಟ್‌ನಲ್ಲಿ ಮೆರವಣಿಗೆಯ ಮೂಲಕ ಶಾಲಾ ಮುಖ್ಯದ್ವಾರಕ್ಕೆ ಕರೆತಂದು, ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು,
2023-2024ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ನಮ್ಮ ಶಾಲೆಯ ಅತುಲ್ ಕೃಷ್ಣ ಮತ್ತು ಪೋಷಕರಾದ ಭಾರತಿ ಯವರು ಮುಖ್ಯ ಅತಿಥಿಗಳಾಗಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತುಲ್ ಕೃಷ್ಣ ತನ್ನ ಹತ್ತು ವರ್ಷದ ಶಾಲಾ ಜೀವನದ ಅನುಭವ ಮತ್ತು ಸಾಧನೆಯನ್ನು ಹಂಚಿಕೊಂಡರು. ಪೋಷಕರಾದ ಭಾರತಿ ಮಕ್ಕಳಿಗೆ ಶುಭ ಹಾರೈಸಿದರು ಅಧ್ಯಕ್ಷತೆ ವಹಿಸಿದ ವಿದ್ಯಾಲಕ್ಷ್ಮಿ ನಾಯಕ್ ರವರು ಮಕ್ಕಳನ್ನು ಕುರಿತು ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗುವಂತೆ ಶುಭ ಹಾರೈಸಿದರು.
ಸಂಭ್ರಮದ ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಮಧುಶ್ರೀ ನಿರೂಪಿಸಿ, ದೀಪಿಕಾ ಸುಭಾಷಿತವನ್ನು ತಿಳಿಯಪಡಿಸಿ, ವಿದ್ಯಾರ್ಥಿಗಳಾದ ಪ್ರಜ್ವಲ್ ರಾಜ್ ಶಾಲೆಯ ನಿಯಮ ಮತ್ತು ಪಾಲನೆಯನ್ನು ಪ್ರಸ್ತುತ ಪಡಿಸಿ, ಆಲಾಪ್ ಸ್ವಾಗತಿಸಿ, ಅದಿಶ್ ವಂದಿಸಿದರು.