29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಳೆಂಜ ಲೋಲಾಕ್ಷರ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿದ ಪ್ರಕರಣ: ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್ ವಿರುದ್ಧ ದೋಷರೋಪ ಪಟ್ಟಿಸಲ್ಲಿಕೆ

ಬೆಳ್ತಂಗಡಿ : ಕಳೆಂಜ ಗ್ರಾಮದ ಲೋಲಾಕ್ಷ ಅವರ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜೂ.1ರಂದು (ದೋಷರೋಪ ಪಟ್ಟಿ)ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಕಳೆದ ವರ್ಷ 2023 ಅಕ್ಟೋಬರ್ ತಿಂಗಳಲ್ಲಿ ಕಳೆಂಜ ಗ್ರಾಮದ ಲೋಲಾಕ್ಷಎಂಬವರು ನೂತನ ಮನೆನಿಮಿ೯ಸಿದ ಜಾಗ ಮೀಸಲು ಅರಣ್ಯ ಎಂದು ಆರೋಪಿಸಿದ ಉಪ್ಪಿನಂಗಡಿ ಅರಣ್ಯ ಇಲಾಖೆ ಮನೆ ಪಂಚಾಂಗವನ್ನು ಕೆಡವಿ ಹಾಕಿದ್ದರು ಯಾವುದೇ ನೋಟಿಸ್ ನೀಡಿದೆ ಏಕಾಏಕಿ ಬಂದು ಮನೆ ದೂಡಿ ಹಾಕಿರುವುದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಉಪಸ್ಥಿತಿಯಲ್ಲಿ ಮನೆ ನಿರ್ಮಾಣ ಮಾಡಲಾಗಿತ್ತು .ನಂತರ ಅರಣ್ಯ ಇಲಾಖೆ ಮನೆಯನ್ನು ತೆರವು ಮಾಡಲು ಅ.9 ರಂದು ಮುಂದಾದಾಗ ಸ್ಥಳೀಯರು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಮತ್ತು ಜಿಲ್ಲೆಯ ಶಾಸಕರು ಆಗಮಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ಕಾಯ೯ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆಧರ್ಮಸ್ಥಳ ಪೊಲೀಸ್‌ ಠಾಣೆಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಎಂಬವರು ದೂರು ನೀಡಿದ್ದರು. ದೋಷರೋಪ ಪಟ್ಟಿ ಸಲ್ಲಿಕೆ:ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಮತ್ತು ಇತರ 15 ಜನ ಸೇರಿ ಒಟ್ಟು 17 ಮಂದಿ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜೂ.1 ರಂದು ದೋಷರೋಪ ಪಟ್ಟಿ ಸಲ್ಲಿಸಿದ್ದಾರೆ.

Related posts

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬೆಳಾಲು ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ವಿಟ್ಲ ಸಾಲೆತ್ತೂರಿನ ಹರೀಶ್ ಪೂಂಜ ಅಭಿಮಾನಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ

Suddi Udaya

ಮೇಲಂತಬೆಟ್ಟು ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಕಣಿಯೂರು ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆ

Suddi Udaya

ಬಂಗಾಡಿ ಶ್ರೀ ಹಾಡಿ ದೈವ ದೈವಸ್ಥಾನ:ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಎಸ್ ಮುಕುಂದ ಸುವರ್ಣ

Suddi Udaya
error: Content is protected !!