ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹೆಣ್ಣು ಮಕ್ಕಳ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಅರಣ್ಯ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಭಜನಾ ಪರಿಷತ್ ರಾಜ್ಯಾಧ್ಯಕ್ಷರು ಮತ್ತು ತಾಲೂಕು ಪದಾಧಿಕಾರಿಗಳು


ಬೆಳ್ತಂಗಡಿ: ಭಜನೆಗೆ ಬರುವಂತಹ ಮಾತೆಯರನ್ನು ಹಾಗೂ ಸಹೋದರಿಯರನ್ನು ಮತ್ತು ಪುಟಾಣಿಗಳನ್ನು ನಮ್ಮ ಸಮಾಜವು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದೆ.

ಇಂತಹ ಸಂದರ್ಭದಲ್ಲಿ ಭಜನೆಗೆ ಜಾತಿಯ ಬಣ್ಣವಿಲ್ಲ ಭಜನೆಯಿಂದ ವಿಭಜನೆ ಇಲ್ಲ ಎನ್ನುವುದನ್ನು ಮರೆತು ಧಾರ್ಮಿಕ ಸಂಘಟನೆಗಳ ಬಗ್ಗೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿರಿಸಿ ಭಜನೆಗೆ ಬರುವಂತಹ ಹೆಣ್ಣು ಮಕ್ಕಳನ್ನು ಸಮಾಜವು ಅಪಹಸ್ಯದಿಂದ ನೋಡುವಂತಹ ಮಾನಹಾನಿಕರ ಹೇಳಿಕೆ ನೀಡಿ ಮಹಿಳೆಯರಿಗೆ ಅವಮಾನ ಮಾಡಿರುವುದನ್ನು ಖಂಡಿಸುವುದು ಮಾತ್ರವಲ್ಲದೆ ಪದೇ ಪದೇ ಭಜನೆಯ ಹಾಗೂ ಮಹಿಳೆಯರ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಿ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆದು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಭಜಕರು ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುವ ಭಜನೆಗೆ ಭಂಗ ತರಲು ಪ್ರಯತ್ನಿಸುತ್ತಿರುವ ಅರಣ್ಯಾಧಿಕಾರಿ ಸಂಜೀವ ಪೂಜಾರಿಯಿಂದ ಮುಚ್ಚಳಿಕೆಯನ್ನು ಬರೆಸಿಕೊಂಡು ಅವರನ್ನು ಅಮಾನತು ಮಾಡಬೇಕು.

ಇಲ್ಲದೆ ಹೋದಲ್ಲಿ ಮುಂದಕ್ಕೆಯು ಇವರು ನೀಡುವಂತ ಅನಗತ್ಯ ಆತಂಕಕಾರಿ ಹೇಳಿಕೆಯಿಂದ ಸಮಾಜದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಬಹುದು ಎಂದು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ , ಉಪಾಧ್ಯಕ್ಷ ರಾಜೇಂದ್ರ ಬಸ್ರೂರು ಕುಂದಾಪುರ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ, ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಜೆ, ಕರಾಯ ವಲಯದ ಸಂಯೋಜಕರಾದ ರಾಜಶೇಖರ್ ಕರಾಯ ಮೊದಲಾದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸುತ್ತಾರೆ.

Related posts

ಡಿ. 29 ರಂದು ನಡೆಯಲಿರುವ ಬಳ್ಳಮಂಜ ಶೇಷ ನಾಗ ಜೋಡು ಕರೆ ಕಂಬಳದ ಪೂರ್ವ ಸಿದ್ಧತಾ ಸಭೆ

Suddi Udaya

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

Suddi Udaya

ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಅಭಿನಂದನ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಕಾರಿಣಿ ಸಭೆ

Suddi Udaya

ಅಳದಂಗಡಿ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಶ್ರೀ ಗುರು ಸಾಲಗಾರರ ಮರಣ ನಿಧಿ ವಿತರಣೆ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಜಿ.ಪಂ.ಕಿ.ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya
error: Content is protected !!