23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಯಿಂದ ಸಮಲೋಚನಾ ಸಭೆ

ಕೊಯ್ಯೂರು: ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಇಲ್ಲಿಗೆ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ಪಿ . ಚಂದ್ರಶೇಖರ ಸಾಲ್ಯಾನ್ ಇವರು ಅಧಿಕೃತವಾಗಿ ಭೇಟಿ ನೀಡಿ ಮಂಡಳಿಯ ಪದಾಧಿಕಾರಿಗಳೊಂದಿಗೆ ಹಾಗೂ ಸದಸ್ಯರುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಭಜನೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಮಲೋಚನೆ ನಡೆಸಿ , ನಮಗೆ ಮಾತ್ರವಲ್ಲದೆ ಮಕ್ಕಳಿಗೂ ವಿವಿಧತೆಯ ಭಜನೆಯಲ್ಲಿ ಶ್ರದ್ಧಾ ಭಕ್ತಿಯಿಂದ ಏಕತೆಯನ್ನು ಕಾಣುವಂತಾಗಲು ನಾವೆಲ್ಲರೂ ಪ್ರೇರಣೆಯಾಗೋಣ ಎಂದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ ಗೌಡ ಬಚ್ಚಿರೆದಡಿ ಉಪಾಧ್ಯಕ್ಷರಾದ ಶೇಖರ ಗೌಡ ಕೋರಿಯಾರು ಗೌರವ ಅಧ್ಯಕ್ಷರಾದ ಲಿಂಗಪ್ಪಗೌಡ ಬೆರ್ಕೆ ಕಾರ್ಯದರ್ಶಿ ಶ ಮನೋಜ್ ಕುಮಾರ್ ಕಜೆ ಕೋಶಾಧಿಕಾರಿ ಪಿ. ಬಾಲಕೃಷ್ಣ ಸಾಲಿಯಾನ್ ಲೆಕ್ಕಪರಿಶೋಧಕರಾದ ಹೇಮಂತಗೌಡ ಬೊಟ್ಟು ಹಾಗೂ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಲಿಂಗಪ್ಪಗೌಡ ಬೆರ್ಕೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Related posts

ಗುರುವಾಯನಕೆರೆ ರತ್ನಗಿರಿ ಅಮರ್ ಜಾಲ್ ರಸ್ತೆ ಚರಂಡಿ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬ

Suddi Udaya

ಉನ್ನತ ಮಟ್ಟದ ಇಲಾಖಾಧಿಕಾರಿಗಳ ಗೈರಿಗೆ ಎರಡನೇ ಬಾರಿಯು ರದ್ದುಗೊಂಡ ಕುವೆಟ್ಟು ಗ್ರಾಮಸಭೆ

Suddi Udaya

ಲಾಯಿಲ: ಎಸ್. ಡಿ. ಪಿ. ಐ ವತಿಯಿಂದ ಹಳೆಪೇಟೆ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಗಾಗಿ ಆಹಾರ ನಿರೀಕ್ಷಕರಿಗೆ ಮನವಿ

Suddi Udaya

ದೆಹಲಿಯ ಗಣರಾಜ್ಯೋತ್ಸವ: ಉಜಿರೆ ಎಸ್.ಡಿ.ಎಂ ಎನ್.ಸಿ.ಸಿಯ 3 ಕೆಡೆಟ್‌ಗಳ ಆಯ್ಕೆ

Suddi Udaya

ಭಾರೀ ಮಳೆಗೆ : ಕೊಕ್ಕಡ ಎಲ್ಯಣ್ಣ ಗೌಡರವರ ಬಾವಿ ಕುಸಿತ: ಅಪಾರ ನಷ್ಟ

Suddi Udaya

ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

Suddi Udaya
error: Content is protected !!