September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಿವೃತ್ತ ಸೇನಾನಿ ಅನೀಶ್ ಡಿ.ಎಲ್‌ ರವರಿಗೆ ಬೆಳ್ತಂಗಡಿಯಲ್ಲಿ ಅದ್ದೂರಿಯ ಸ್ವಾಗತ

ಬೆಳ್ತಂಗಡಿ : ಕಳೆದ 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಆಗಮಿಸಿದ ಧರ್ಮಸ್ಥಳದ ಅನೀಶ್ ಡಿ.ಎಲ್ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ನಿವೃತ್ತ ಅನೀಶ್ ಡಿ.ಎಲ್ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಅವರನ್ನು ಭವ್ಯ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ಬೆಳ್ತಂಗಡಿ ಇನ್ಸ್ ಪೆಕ್ಟರ್ ಸುಬ್ಭಾಪುರ ಮಠ್ ಸೇರಿದಂತೆ ಗಣ್ಯರು ಪುಷ್ಪ ಗುಚ್ಚನೀಡಿ ಅವರನ್ನು ಸ್ವಾಗತಿಸಿದರು.

ಕೆ.ಎಸ್. ಎಂ.ಸಿ ಎ ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ಬೆಳ್ತಂಗಡಿ ಸಿರಿಯನ್ ಕಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಹಿರಿಯ ಮುಖಂಡರಾದ ರಾಜಶೇಖರ ಅಜ್ರಿ, ಭರತ್ ಬಂಗಾಡಿ, ವಿವಿಧ ಸಂಘಟನೆಗಳ ಮುಖಂಡರುಗಳಾದ ರೋಯಿ ಪುದುವೆಟ್ಟು, ಜಾರ್ಜ್ ಕಾಂಜಾಲ್, ದಾಯಾನಂದ ಬೆಳಾಲು, ರೋಬಿನ್ ಓಡಂಪಳ್ಳಿ, ರೆಜಿ ಬೆಳ್ತಂಗಡಿ, ಅಜಯ್ ಎ.ಜೆ, ಬಿ.ಕೆ ವಸಂತ್, ಸೆಬಾಸ್ಟಿಯನ್ ಬಂಗಾಡಿ, ಶೇಖರ ಲಾಯಿಲ, ಜೇಮ್ಸ್ ಕೆ.ಜೆ, ಹಾಗೂ ಇತರರು ಇದ್ದರು.

Related posts

ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಕಲ್ಮಂಜ: ಆನಂಗಳ್ಳಿ ವಾಳ್ಯದ ಕೂಳೂರು ನಿವಾಸಿ ತಾರಾ ಪರಾಂಜಪೆ ನಿಧನ

Suddi Udaya

ಧರ್ಮಸ್ಥಳ: ಹದೆಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ: ಮತದಾನ ಬಹಿಷ್ಕಾರದ ಎಚ್ಚರಿಕೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ:

Suddi Udaya

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ಆರೋಪಿ ಲಾಯಿಲ ನಿವಾಸಿ ಸಾಜಿಲ್ ಗೆ ಶಿಕ್ಷೆ

Suddi Udaya
error: Content is protected !!